ಬೆಂಗಳೂರು: ಗೋವು ಹಾಗೂ ಜಾನುವಾರುಗಳನ್ನು ಕಳುವು , ಹತ್ಯೆ ಮಾಡುವವರನ್ನು ರಸ್ತೆ ಸರ್ಕಲ್ ನಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ಗುಂಡುಹೊಡೆಯಬೇಕು ಎಂದು ಸಚಿವ ಮಂಕಾಳು ವೈದ್ಯ ಹೇಳಿಕೆ ನೀಡಿದ್ದು, ಹೊಸ ವಿವಾದ ಸೃಷ್ಟಿಸಿದೆ.
ನಾವು ಪೂಜೆ ಮಾಡುವ ಗೋವನ್ನು ಬಹಳ ಪ್ರೀತಿಯಿಂದ ಸಾಕುತ್ತೇವೆ. ಅದರ ಹಾಲನ್ನು ಕುಡಿದು ನಾವು ಬದುಕುತ್ತೇವೆ. ಆದರೆ ಇಂದು ಗೋವು ಕಡಿಯುವ ದುಷ್ಕೃತ್ಯ ನಡೆದಿದೆ. ಪೊಲೀಸರಿಗೆ ಈಗಾಗಲೇ ನಾನು ಹೇಳಿದ್ದೇನೆ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಇಷ್ಟಾಗ್ಯೂ ಕ್ರೌರ್ಯ ಮುಂದುವರೆದಿದೆ ಎಂದು ವಾಗ್ದಾಳಿ ನಡೆಸಿದರು.
ಇದು ಮರುಕಳಿಸಿದರೆ ನಾನು ಹೀಗೆ ಹೇಳುವುದು ತಪ್ಪಾಗಬಹುದು ಆದರೆ ಆರೋಪಿಗಳನ್ನು ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡುಹೊಡೆಯುತ್ತೇನೆ. ಇನ್ಮೇಲೆ ಇಂತಹ ಕೃತ್ಯ ನಡೆದರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡುಹೊಡೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಡಿದು ತಿನ್ನಿ. ಇಂತಹ ಕೆಲಸಗಳನ್ನು ಮಾಡಬೇಡಿ. ನಮ್ಮ ಜಿಲ್ಲೆಯಲ್ಲಿ ಮಾಡಲು ಸಾಕಷ್ಟು ಕೆಲಸಗಳಿವೆ. ನ್ಯಾಯಯುತವಾಗಿ ದುಡಿದು ತಿನ್ನಿ ಎಂದು ಗುಡುಗಿದರು.