ತಮ್ಮ 20 ವರ್ಷದ ಮಗಳು “ಎಂದಿಗೂ ಚಿಕ್ಕ ಹುಡುಗಿಯಂತೆಯೇ ಇರಬೇಕು” ಎಂದು ವರ್ಷಗಳ ಕಾಲ ಕಟ್ಟುನಿಟ್ಟಿನ ಆಹಾರ ಪದ್ಧತಿಯಲ್ಲಿಟ್ಟು, ಸಣ್ಣಗೆ ಮತ್ತು ತೆಳ್ಳಗೆ ಇರಿಸಿದ್ದಕ್ಕಾಗಿ ಪೋಷಕರನ್ನು ಮಕ್ಕಳ ದುರುಪಯೋಗದ ಆರೋಪದ ಮೇಲೆ ಬಂಧಿಸಲಾಗಿದೆ.
ಆಸ್ಟ್ರೇಲಿಯಾದ ದಂಪತಿ, ಪರ್ತ್ ಉಪನಗರದಲ್ಲಿ ವಾಸಿಸುತ್ತಿದ್ದು, ತಮ್ಮ ಮಗಳಿಗೆ ಸಾಕಷ್ಟು ಪೋಷಣೆ ನೀಡಲು ವಿಫಲರಾದ ಕಾರಣ ಅಪರಾಧಿ ಎಂದು ಘೋಷಿಸಲಾಗಿದೆ. ಆಕೆ 16 ವರ್ಷದವಳಿದ್ದಾಗ ಕೇವಲ 27 ಕಿಲೋ ತೂಕ ಹೊಂದಿದ್ದಳು.
ಯುವತಿ ಎಷ್ಟು ತೆಳ್ಳಗೆ ಮತ್ತು ಬಳಲಿದ್ದಳು ಎಂದರೆ ಆಸ್ಪತ್ರೆಗೆ ದಾಖಲಿಸಬೇಕಾಯಿತು ಮತ್ತು ಫೀಡಿಂಗ್ ಟ್ಯೂಬ್‌ನಲ್ಲಿ ಇರಿಸಬೇಕಾಯಿತು. ಆಕೆಯ ತಂದೆ ಆಕೆ ತನ್ನ ವಯಸ್ಸಿಗಿಂತ ಚಿಕ್ಕವಳಾಗಿ ಕಾಣುವಂತೆ ಮಾಡಲು ಜನ್ಮ ಪ್ರಮಾಣಪತ್ರದಲ್ಲಿ ಜನ್ಮ ದಿನಾಂಕವನ್ನು ಬದಲಾಯಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ.
ಪೋಷಕರು ಆಕೆ 16 ವರ್ಷದವಳಿದ್ದಾಗ ಶಾಲಾಪೂರ್ವ ವಯಸ್ಸಿನ ಬಟ್ಟೆಗಳನ್ನು ನೀಡುವ ಮೂಲಕ ಚಿಕ್ಕ ಹುಡುಗಿಯಂತೆ ಕಾಣುವಂತೆ ಮಾಡಿದ್ದರು. ದಂಪತಿಗಳು ಆಕೆಗೆ ಭಾವನಾತ್ಮಕ, ಸಾಮಾಜಿಕ ಮತ್ತು ಕ್ರಿಯಾತ್ಮಕ ಬೆಳವಣಿಗೆಯನ್ನು ನೀಡಲು ವಿಫಲರಾದ ಕಾರಣ ಅಪರಾಧಿ ಎಂದು ಹೇಳಲಾಗಿದೆ, ಏಕೆಂದರೆ ಹುಡುಗಿ ತನ್ನ ಜೀವನದ ಬಹುಪಾಲು ಭಾಗ ಮನೆಯಲ್ಲೇ ಕಳೆದಿದ್ದು ಮತ್ತು ಜಗತ್ತಿನಿಂದ ಮರೆಮಾಡಲಾಯಿತು. ಆಕೆಯ ಬ್ಯಾಲೆ ಶಿಕ್ಷಕರು ಕಾಳಜಿ ವಹಿಸಿದ ನಂತರ ಆಕೆಯ ಸ್ಥಿತಿ ಇದೆ ಮೊದಲು ಬೆಳಕಿಗೆ ಬಂದಿದೆ.