alex Certify ದಾರುಣ ಘಟನೆ: ಅಂತ್ಯಕ್ರಿಯೆಗೆ ಹಣವಿಲ್ಲದೆ ತಾಯಿಯ ಶವ ಮನೆಯಲ್ಲೇ ಇಟ್ಟುಕೊಂಡ ಸಹೋದರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರುಣ ಘಟನೆ: ಅಂತ್ಯಕ್ರಿಯೆಗೆ ಹಣವಿಲ್ಲದೆ ತಾಯಿಯ ಶವ ಮನೆಯಲ್ಲೇ ಇಟ್ಟುಕೊಂಡ ಸಹೋದರಿಯರು

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಇಬ್ಬರು ಯುವತಿಯರು ತಮ್ಮ ತಾಯಿಯ ಅಂತ್ಯಕ್ರಿಯೆಗೆ ಹಣವಿಲ್ಲದೆ ಒಂದು ವಾರಕ್ಕೂ ಹೆಚ್ಚು ಕಾಲ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ವಾರಸಿಗುಡ ನಿವಾಸಿ ಸಿ. ಲಲಿತಾ ಅನಾರೋಗ್ಯದಿಂದ ಕಳೆದ ವಾರ ನಿಧನರಾಗಿದ್ದು, ಅವರ ಪುತ್ರಿಯರಾದ 25 ವರ್ಷದ ರವಾಲಿಕಾ ಮತ್ತು 22 ವರ್ಷದ ಅಶ್ವಿತಾಗೆ ತಾಯಿಯ ಅಂತ್ಯಕ್ರಿಯೆಗೆ ಹಣ ಹೊಂದಿಸಲು ಸಾಧ್ಯವಾಗಿಲ್ಲ.

ವರದಿಗಳ ಪ್ರಕಾರ, ಅವರ ತಂದೆ 2020 ರಲ್ಲಿ ಜಗಳದ ನಂತರ ಕುಟುಂಬವನ್ನು ತೊರೆದಿದ್ದು, ಅವರಿಗ್ಯಾವ ಆರ್ಥಿಕ ಸಹಾಯವೂ ಇರಲಿಲ್ಲ. ತಾಯಿಯ ಶವ ಒಂದು ಕೋಣೆಯಲ್ಲಿದ್ದರೆ, ಸಹೋದರಿಯರು ಮತ್ತೊಂದು ಕೋಣೆಯಲ್ಲಿ ವಾಸಿಸುತ್ತಿದ್ದರು.

ನೆರೆಹೊರೆಯವರು ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪರಿಸ್ಥಿತಿ ಬೆಳಕಿಗೆ ಬಂದಿತು. ಬಳಿಕ ಅಧಿಕಾರಿಗಳು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು.

ಪೊಲೀಸರ ಮಧ್ಯಪ್ರವೇಶದ ಮೊದಲು, ಸಹೋದರಿಯರು ತಮ್ಮ ತಾಯಿಯ ಅಂತ್ಯಕ್ರಿಯೆಗಾಗಿ ಸ್ಥಳೀಯ ಮಲ್ಟಿಪರ್ಪಸ್ ಹಾಲ್‌ನ ಸಹಾಯವನ್ನು ಕೋರಿದ್ದರು. ಹಾಲ್ ಅಧಿಕಾರಿಗಳು ಚಿಲ್ಕಲ್ಗುಡ ಪೊಲೀಸರನ್ನು ಸಂಪರ್ಕಿಸಿದ್ದು, ಅವರು ನಂತರ ಬೌದ್ಧನಗರ್ ಪೊಲೀಸ್ ಠಾಣೆಗೆ ತಿಳಿಸಿದ್ದರು.

ವರದಿಗಳ ಪ್ರಕಾರ, ಕುಟುಂಬವು ಕೇವಲ ಎರಡು ತಿಂಗಳ ಹಿಂದೆ ವಾರಸಿಗುಡಕ್ಕೆ ಸ್ಥಳಾಂತರಗೊಂಡಿತ್ತು. ಇಬ್ಬರು ಸಹೋದರಿಯರು ಅಂಬರ್‌ಪೇಟ್‌ನಲ್ಲಿರುವ ಸಂಬಂಧಿಯೊಬ್ಬರನ್ನು ಸಹಾಯಕ್ಕಾಗಿ ಸಂಪರ್ಕಿಸಿದ್ದರು, ಆದರೆ ಅವರು ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ವರದಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...