ಬೆಂಗಳೂರು: ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ(ಕೆಪಿಎಂಇ) ನಿಯಮಗಳು ಉಲ್ಲಂಘಿಸಿದ ಖಾಸಗಿ ವೈದ್ಯಕೀಯ ಸಂಸ್ಥೆ, ಕ್ಲಿನಿಕ್ ಹಾಗೂ ಪುನರ್ವಸತಿ ಕೇಂದ್ರಗಳ ವಿರುದ್ದ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್.ಜಿ ಅವರು ಆದೇಶಿಸಿದ್ದಾರೆ.
ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮಂಡೂರು ಗ್ರಾಮದ ಕೆ.ಇ.ಬಿ ನಿಲ್ದಾಣದ ಹತ್ತಿರದಲ್ಲಿರುವ ಶ್ರೀನಿಧಿ ಟ್ರಸ್ಟ್ ಪುನರ್ವಸತಿ ಕೇಂದ್ರವು ಅಂಬರೀಶ್ ಎಸ್. ಅವರ ಕ್ಲಿನಿಕ್-ಪಾಲಿಕ್ಲಿನಿಕ್ – ಆಲೋಪಥಿ ವೈದ್ಯಕೀಯ ವ್ಯವಸ್ಥೆಯಲ್ಲಿ ಕೇವಲ ಸಮಾಲೋಚನೆ ಸೇವೆ ಎಂಬ ಹೆಸರಿನಲ್ಲಿ ಏಪ್ರಿಲ್ 01, 2021 ರಂದು ಕೆಪಿಎಂಇ ಅಂತರ್ಜಾಲದಲ್ಲಿ ನೋಂದಣಿಯಾಗಿರುತ್ತದೆ. ಆದರೆ ಪರಿಶೀಲನೆಯ ವೇಳೆಯಲ್ಲಿ ಸಹಿಯಾಗಿರುವ ಮಾರ್ಚ್ 01, 2021 ಎಂದು ನಮೂದಾಗಿರುವುದು ಕಂಡುಬಂದಿರುತ್ತದೆ.
ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಹಿರಂಡಹಳ್ಳಿ ಗ್ರಾಮದಲ್ಲಿ ಇರುವ ರೈಸ್ ಫೌಂಡೇಶನ್ ಪುನರ್ವಸತಿ ಸಂಸ್ಥೆಯು ಚಿರಂಜೀವಿ ಎ.ಆರ್. ಅವರ ಕ್ಲಿನಿಕ್/ಪಾಲಿಕ್ಲಿನಿಕ್ – ಆಲೋಪಥಿ ವೈದ್ಯಕೀಯ ವ್ಯವಸ್ಥೆಯಲ್ಲಿ ಕೇವಲ ಸಮಾಲೋಚನೆ ಸೇವೆ ಎಂಬ ಹೆಸರಿನಲ್ಲಿ ಏಪ್ರಿಲ್ 07, 2021 ರಂದು ಕೆಪಿಎಂಇ ಅಂತರ್ಜಾಲದಲ್ಲಿ ನೋಂದಣಿಯಾಗಿದೆದೆ. ಆದರೆ ಪರಿಶೀಲನೆಯ ವೇಳೆಯಲ್ಲಿ ಈ ಸಂಸ್ಥೆಯವರು ನೀಡಿರುವ ಕೆಪಿಎಂಇ ದಾಖಲಾತಿ ಪ್ರತಿಯಲ್ಲಿ ಸಂಸ್ಥೆಯು ಬಾಲಕೃಷ್ಣ ಅವರ ಆಲೋಪಥಿ ವೈದ್ಯಕೀಯ ಆಸ್ಪತ್ರೆ ಎಂದು ಏಪ್ರಿಲ್ 07, 2021 ರಂದು ನೋಂದಣಿಯಾಗಿತ್ತದೆ. ಆದರೆ ಸಹಿಯಾಗಿರುವ ಮಾರ್ಚ್ 01, 2021 ಎಂದು ನಮೂದಾಗಿರುವುದು ಕಂಡುಬಂದಿರುತ್ತದೆ.
ಈ ಎರಡು ಸಂಸ್ಥೆಗಳ ದಾಖಲಾತಿಗಳನ್ನು ಗಮನಿಸಿದಾಗ ಸಂಸ್ಥೆಯವರು ನಕಲಿ ದಾಖಲಾತಿಗಳನ್ನು ಸಲ್ಲಿಸಲಿರುವುದು ಹಾಗೂ ಅನಧಿಕೃತವಾಗಿ ಸಂಸ್ಥೆಯನ್ನು ನಡೆಸುತ್ತಿರುವುದು ಕಂಡುಬಂದಿರುತ್ತದೆ ಎಂದು ಈ ಸಂಸ್ಥೆಗಳ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.