ಭಂಡಾರದಲ್ಲಿನ ಆಹಾರಕ್ಕೆ ಮಣ್ಣು ಹಾಕಿದ ಪೊಲೀಸ್; ವಿಡಿಯೋ ವೈರಲ್‌ ಬಳಿಕ ಸಸ್ಪೆಂಡ್‌ | Watch

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳದಲ್ಲಿ ಭಕ್ತರಿಗಾಗಿ ಆಯೋಜಿಸಲಾಗಿದ್ದ ಭಂಡಾರದಲ್ಲಿನ ಆಹಾರದ ಪಾತ್ರೆಗೆ ಮಣ್ಣು ಹಾಕುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸೋರಾಂ ಸ್ಟೇಷನ್ ಇನ್‌ಚಾರ್ಜ್ ಬ್ರಿಜೇಶ್ ತಿವಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ಗಂಗಾನಗರ್ ಕುಲದೀಪ್ ಸಿಂಗ್ ಗುನಾವತ್ ತಿಳಿಸಿದ್ದಾರೆ.

ಮಹಾಕುಂಭಕ್ಕೆ ಆಗಮಿಸಿದ್ದ ಭಕ್ತರಿಗೆ ಆಹಾರವನ್ನು ತಯಾರಿಸಲಾಗುತ್ತಿತ್ತು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬ ಆಹಾರದ ಪಾತ್ರೆಯಲ್ಲಿ ಮಣ್ಣು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು X (Twitter) ನಲ್ಲಿ ಹಂಚಿಕೊಂಡಿದ್ದಾರೆ.

ಯಾದವ್ ಪೋಸ್ಟ್‌ನಲ್ಲಿ, “ಮಹಾಕುಂಭದಲ್ಲಿ ಸಿಲುಕಿರುವವರಿಗೆ ಆಹಾರ ಮತ್ತು ನೀರನ್ನು ಒದಗಿಸಲು ವ್ಯವಸ್ಥೆ ಮಾಡುತ್ತಿರುವವರ ಉತ್ತಮ ಪ್ರಯತ್ನಗಳನ್ನು ರಾಜಕೀಯ ದ್ವೇಷದಿಂದಾಗಿ ಹಾಳುಮಾಡಲಾಗುತ್ತಿದೆ ಎಂಬುದು ದುರದೃಷ್ಟಕರ. ಸಾರ್ವಜನಿಕರು ಗಮನಿಸಬೇಕು” ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಗಂಗಾ ನಗರದ ಅಧಿಕೃತ ಖಾತೆ, “ವಿಷಯವನ್ನು ಗಮನಕ್ಕೆ ತೆಗೆದುಕೊಂಡು, ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಗಂಗಾ ನಗರ) ಎಸಿಪಿ ಸೋರಾಂ ವರದಿಯ ಆಧಾರದ ಮೇಲೆ ಸೋರಾಂ ಎಸ್‌ಎಚ್‌ಒವನ್ನು ಅಮಾನತುಗೊಳಿಸಿದ್ದಾರೆ. ಇಲಾಖಾ ಕ್ರಮಗಳು ಜಾರಿಯಲ್ಲಿವೆ.” ಎಂದು ಹೇಳಿದೆ.

ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 30 ಜನರು ಸಾವನ್ನಪ್ಪಿ 60 ಮಂದಿ ಗಾಯಗೊಂಡ ಒಂದು ದಿನದ ನಂತರ ಈ ಘಟನೆ ನಡೆದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read