ಬೆಂಗಳೂರಿಗರೇ ಹುಷಾರ್! ಸಿಲಿಕಾನ್ ಸಿಟಿಗೂ ಎಂಟ್ರಿಕೊಟ್ಟಿದೆ ಗರುಡ ಗ್ಯಾಂಗ್: ಕಿಡ್ನ್ಯಾಪ್ ಮಾಡಿ ಹಣ ದೋಚುವುದೇ ಇವರ ಕೆಲಸ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಳ್ಳತನ, ದರೋಡೆ, ಕಿಡ್ನ್ಯಾಪ್, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಜೀವಭಯದಲ್ಲೇ ಜನರು ಕಾಲ ಕಳೆಯುವ ಸ್ಥಿತಿ ಎದುರಾಗಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಗರುಡ ಗ್ಯಾಂಗ್ ಎಂಬ ಖದೀಮರ ಗುಂಪು ಎಂಟ್ರುಕೊಟ್ಟಿದೆ.

ಉಡುಪಿ ಮೂಲದ ಗರುಡ ಗ್ಯಾಂಗ್ ಎಂಬ ಖದೀಮರ ಗುಂಪು ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಅಪಹರಿಸಿ ಹಣವನ್ನು ದೋಚಿ ಪರಾರಿಯಾಗಿತ್ತಿದ್ದಾರೆ. ಬೆಂಗಳೂರಿನ ನೆಲಮಂಗಲದ ಬಳಿ ಉದ್ಯಮಿ ಇಕ್ಬಾಲ್ ಎಂಬುವವರನ್ನು ಸಿನಿಮೀಯ ರೀತಿಯಲ್ಲಿ ಈ ಗ್ಯಾಂಗ್ ಅಪಹರಿಸಿತ್ತು.

ದಕ್ಷಿಣ ಕನ್ನಡದ ಕೊಟ್ರೆ ಗ್ರಾಮದ ನಿವಾಸಿ ಉದ್ಯಮಿ ಇಕ್ಬಾಲ್ ಪೆಟ್ರೋಲ್ ಹಾಗೂ ಟ್ರಾನ್ಸ್ ಪೋರ್ಟ್ ಉದ್ಯಮಿಯಾಗಿದ್ದಾರೆ. ಬೆಂಗಳೂರಿಗೆ ಬಂದಿದ್ದ ಇಕ್ಬಾಲ್ ಕೆಲಸ ಮುಗಿಸಿಕೊಂಡು ಊರಿಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ನೆಲಮಂಗಲದಿಂದ ಮಂಗಳೂರು ಮಾರ್ಗವಾಗಿ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೂರು ಕಾರುಗಳಲ್ಲಿ ಬಂದ ಗ್ಯಾಂಗ್, ಇಕ್ಬಾಲ್ ಅವರ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ, ಅವರನ್ನು ಅಪಹರಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು, ಚಿತ್ರಹಿಂಸೆ ನೀಡಿ, ಮೊಬೈಲ್ ಮೂಲಕ ಅವರ ಬ್ಯಾಂಕ್ ಖಾತೆಯಿಂದ 15 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ. ಮರುದಿನ ಸಕಲೇಶಪುರದಲ್ಲಿರುವ ಅವರ ಸಹೋದರನ ರೆಸಾರ್ಟ್ ಗೆ ತೆರಳಿ ಆತನನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಆತನಿಂದಲೂ 13 ಲಕ್ಷ ಹಣ ಪಡೆದು ಬಳಿ ಇಕ್ಬಾಲ್ ಅವರನ್ನು ರೆಸಾರ್ಟ್ ಬಳಿಯೇ ಬಿಟ್ಟು ಕಾರಿನ ಸಮೇತ ಎಸ್ಕೇಪ್ ಆಗಿದ್ದಾರೆ.

ಗರುಡ ಗ್ಯಾಂಗ್ ಎಂದು ಪೊಲೀಸರಿಗೆ ದೂರು ನೀಡಿದರೆ ಉದ್ಯಮವನ್ನೇ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read