ಪಂಜಾಬ್‌ನ ಲೂದಿಯಾನಾದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರ ಮೊಬೈಲ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿದ್ದು, ಯುವತಿ ಕೆಳಗೆ ಬಿದ್ದ ವೇಳೆ ಹಲವು ಮೀಟರ್ ವರೆಗೆ ಎಳೆದುಕೊಂಡು ಹೋಗಿದ್ದಾನೆ. ಈ ಎದೆ ನಡುಗಿಸುವ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಘಟನೆಯ ವಿವರ: ಭಾನುವಾರ, ರೋಸ್ ಗಾರ್ಡನ್ ಬಳಿ ಈ ಘಟನೆ ನಡೆದಿದ್ದು, ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಯುವತಿಯಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಯುವತಿ ತನ್ನ ಫೋನ್ ಬಿಡದೆ ಹಿಡಿದಿದ್ದರಿಂದ ಸ್ವಲ್ಪ ದೂರ ರಸ್ತೆಯಲ್ಲಿ ಎಳೆಸಲ್ಪಟ್ಟಿದ್ದು, ನಂತರ ಅವರು ಬಿದ್ದು ಹೋಗಿದ್ದಾರೆ ಆಗ ಕಳ್ಳ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ.
ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಯುವತಿಗೆ ಗಾಯಗಳಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
In a shocking incident in Ludhiana, a girl was dragged on the streets by a man attempting to snatch her phone. The girl held onto her phone despite being dragged, and the snatcher fled after she fell. The phone’s fate remains uncertain. #Ludhiana #ShrutiHaasan #ShehnaazGill pic.twitter.com/0SKDbOkFyY
— True Scoop (@TrueScoopNews) January 28, 2025