ನಾಳೆ ಬಿಡುಗಡೆಯಾಗಲಿದೆ ‘ತಾಂಡೇಲ್’ ಟ್ರೈಲರ್ 27-01-2025 12:50PM IST / No Comments / Posted In: Featured News, Live News, Entertainment ಚಂದೂ ಮೊಂಡೆಟಿ ನಿರ್ದೇಶನದ ನಾಗ ಚೈತನ್ಯ ಅಭಿನಯದ ಬಹು ನಿರೀಕ್ಷಿತ ‘ತಾಂಡೇಲ್’ ಚಿತ್ರ ಮುಂದಿನ ತಿಂಗಳು ಫೆಬ್ರವರಿ 7 ರಂದು ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ ಇದರ ಟ್ರೈಲರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುವುದರ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದು, ಗೀತಾ ಆರ್ಟ್ಸ್ ಬ್ಯಾನರ್ ನಲ್ಲಿ ಬನ್ನಿ ವಾಸ್ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಭಾನು ಪ್ರತಾಪ, ರಿಯಾಜ್ ಚೌಧರಿ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ನವೀನ್ ನೂಲಿ ಸಂಕಲನ, ಸುಪ್ರೀಮ್ ಸುಂದರ್, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ವಿಜೆ ಶೇಖರ್ ನೃತ್ಯ ನಿರ್ದೇಶನವಿದೆ. View this post on Instagram A post shared by Annapurna Studios (@annapurnastudios)