ನೈಜೀರಿಯಾ: ಆಗ್ನೇಯ ನೈಜೀರಿಯಾದಲ್ಲಿ ಸಂಭವಿಸಿದ ಟ್ರಕ್ ಅಪಘಾತದಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರೋಲ್ ತುಂಬಿದ ಟ್ಯಾಂಕರ್ ನಿಯಂತ್ರಣ ತಪ್ಪಿ 17 ವಾಹನಗಳಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ಟ್ರಕ್ನ ಬ್ರೇಕ್ ವಿಫಲವಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಎಕ್ಸ್ಪ್ರೆಸ್ವೇಯಲ್ಲಿ ಸುಮಾರು 17 ವಾಹನಗಳಿಗೆ ಟ್ರಕ್ ಡಿಕ್ಕಿ ಹೊಡೆದಿದೆ.
ಗಾಯಗೊಂಡ ಹತ್ತು ಜನರನ್ನು ರಕ್ಷಿಸಲಾಗಿದ್ದು, ಮೂವರನ್ನು ಯಾವುದೇ ಹಾನಿಯಿಲ್ಲದೆ ರಕ್ಷಿಸಲಾಗಿದೆ” ಎಂದು ಅವರು ಹೇಳಿದರು. ಮೃತಪಟ್ಟವರು “ಗುರುತಿಸಲಾಗದಷ್ಟು” ಸುಟ್ಟು ಹೋಗಿದ್ದಾರೆ ಎಂದು ಹೇಳಿದೆ.
ಆಂಟಿ-ಸ್ಪಿಲ್ ಲಾಕ್ ಹೊಂದಿರದ ಟ್ಯಾಂಕರ್ ಗಳನ್ನು ನಿಷೇಧಿಸುವ ನಿಯಮಗಳನ್ನು ಜಾರಿಗೆ ತರಲು ಎಫ್ ಆರ್ ಎಸ್ ಸಿಯನ್ನು ಒತ್ತಾಯಿಸಿದ್ದೇನೆ ಎಂದು ಎನುಗು ರಾಜ್ಯ ಗವರ್ನರ್ ಪೀಟರ್ ಎಂಬಾಹ್ ಹೇಳಿದ್ದಾರೆ.