ಮೈಸೂರು: ಸರ್ಕಾರಿ ಕೆಲಸವನ್ನು ಬಿಟ್ಟು, ವಿದೇಶದಿಂದ ಯುವತಿಯರನ್ನು ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಮೈಸೂರಿನ ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ.
ರತನ್ ಬಂಧಿತ ಆರೋಪಿ. ಕೆ.ಎಸ್.ಆರ್.ಟಿ.ಸಿ ನೌಕರನಾಗಿದ್ದ ರತನ್ ಕೆಲಸ ಬಿಟ್ಟು, ಥೈಲ್ಯಾಂಡ್ ನಿಂದ ಯುವತಿಯರನ್ನು ಕರೆಸಿ, ಮೈಸೂರಿನ ಬೊಗಾದಿ ರಿಂಗ್ ರಸ್ತೆಯ ಹೋಟೆಲ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ. ಆರೋಪಿ ರತನ್ ದಂಧೆಗೆ ರೇವಣ್ಣ ಎಂಬಾತ ಸಾಥ್ ನೀಡಿದ್ದ. ರತನ್ ಪ್ರತಿ ಗಿರಾಕಿಯಿಂದ 8-10 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದ.
ಹೈಟೆಕ್ ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ರತನ್ ಸೇರಿ 7 ಜನರನ್ನು ಬಂಧಿಸಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.
ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.