ಬೆಂಗಳೂರು: ಅಮೆರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು, ಕ್ಯಾನ್ಸರ್ ಕಾಯಿಲೆ ಗೆದ್ದು ಬಂದಿರುವ ನಟ ಶಿವರಾಜ್ ಕುಮಾರ್ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ನಟ ಶಿವರಾಜ್ ಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ‘ಕಿಂಗ್ ಈಸ್ ಬ್ಯಾಕ್’ ಎನ್ನುತ್ತಾ ಮಾತು ಆರಂಭಿಸಿದ್ದಾರೆ. ಎಲ್ಲರ ಧೈರ್ಯ, ಆಶಿರ್ವಾದದಿಂದಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ವಾಪಾಸ್ ಆಗಿದ್ದೇನೆ. ತುಂಬಾ ಜನರು ನನಗೆ ಧೈರ್ಯ ತುಂಬಿದ್ದರು. ನಿಮ್ಮ ಧೈರ್ಯವನ್ನು ಮೆಚ್ಚಬೇಕು ಎಂತಾ ವೈದ್ಯರು ಕೂಡ ಹೇಳಿದ್ದರು ಎಂದರು.
ಎರಡ್ಮೂರು ದಿನಗಳ ಕಾಲ ಲಿಕ್ವಿಡ್ ಫುಡ್ ನಲ್ಲೇ ಇದ್ದೆ. ಜೀವನವೇ ಒಂದು ಪಾಠ. ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ಎದುರಿಸುತ್ತಾ ಹೋಗಬೇಕು. ನಾನು ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತಿದ್ದೇನೆ ಎಂದು ಹೇಳಿದರು.
ಮುಂದಿನ ಪ್ರಾಜೆಕ್ಟ್ ಕುರಿತು ತಯಾರಿ ಮಾಡುತ್ತೇನೆ. 131ನೇ ಸಿನಿಮಾ ಬಗ್ಗೆ ಪ್ಲಾನ್ ಮಾಡುತ್ತೇನೆ. ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು.