alex Certify BIG NEWS: ಧ್ವಜಾರೋಹಣದ ವೇಳೆ ಅವಘಡ: ದೇಶದ ಎರಡನೇ ಅತಿ ಎತ್ತರದ ದ್ವಜಸ್ತಂಭದಿಂದ ಜಾರಿ ಬಿದ್ದ ತ್ರಿವರ್ಣ ಧ್ವಜ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಧ್ವಜಾರೋಹಣದ ವೇಳೆ ಅವಘಡ: ದೇಶದ ಎರಡನೇ ಅತಿ ಎತ್ತರದ ದ್ವಜಸ್ತಂಭದಿಂದ ಜಾರಿ ಬಿದ್ದ ತ್ರಿವರ್ಣ ಧ್ವಜ!

ವಿಜಯನಗರ: ದೇಶದಾದ್ಯಂತ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಈ ವೇಳೆ ವಿಜಯನಗರ ಜಿಲ್ಲೆಯಲ್ಲಿ ಅವಘಡವೊಂದು ಸಂಭವಿಸಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸುತ್ತಿದ್ದ ವೇಳೆ ದೇಶದ ಎರಡನೇ ಅತಿ ಎತ್ತರದ ದ್ವಜಸ್ತಂಭದಿಂದ ತ್ರಿವರ್ಣ ಧ್ವಜ ಕೆಳಗೆ ಬಿದ್ದ ಘಟನೆ ನಡೆದಿದೆ.

ವಿಜಯನಗರದ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಅತಿ ಎತ್ತರದ ಧ್ವಜ ಸ್ತಂಭದಲ್ಲಿ ಏರಿಸಿದ್ದ ಧ್ವಜ ಏಕಾಏಕಿ ಕೆಳಗೆ ಬಿದ್ದಿದೆ.

ಸಚಿವ ಜಮೀರ್ ಅಹ್ಮದ್ ವೇದಿಕೆಗೆ ಬಂದು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿದ್ದರು. ಬಳಿಕ ಪರೇಡ್ ವೀಕ್ಷಿಸಿ, ಪರೇಡ್ ತಂಡಗಳು ಪಥಸಂಚಲನದ ಮೂಲಕ ನೀಡುವ ಗೌರವ ವಂದನೆ ಸ್ವೀಕರಿಸುತ್ತಿದ್ದರು. ಈ ವೇಳೆ ಬೃಹತ್ ತ್ರಿವರ್ಣಧ್ವಜ, ಧಜಸ್ತಂಭದಿಂದ ಏಕಾಏಕಿ ಕುಸಿದು ಬಿದ್ದಿದೆ.

ಅದೃಷ್ಟವಶಾತ್ ಧ್ವಜಸ್ತಂಭದ ಬಳಿ ಇದ್ದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಧ್ವಜ ಕುಸಿದು ಬೀಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...