ದಮನ್ ಬೀಚ್ನಲ್ಲಿ ಹಪ್ಪಳ ಮಾರಾಟ ಮಾಡುತ್ತಿದ್ದ ಒಬ್ಬ ಬಾಲಕನಿಗೆ ವ್ಯಕ್ತಿಯೋರ್ವ 500 ರೂಪಾಯಿ ನೀಡಿದಾಗ ನಡೆದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
‘YouNick Viral Trust’ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈಗಾಗಲೇ 10 ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
“ಹಪ್ಪಳ ಇನ್ನೂ ಮಾರಾಟವಾಗಿಲ್ಲ” ಎಂದು ಬಾಲಕ ವ್ಯಕ್ತಿಗೆ ಹೇಳಿದಾಗ, ಆ ವ್ಯಕ್ತಿ ಅದನ್ನು ಖರೀದಿಸಲು ಮುಂದಾಗಿದ್ದು, ಬೆಲೆ ಕೇಳಿದ್ದಾರೆ.
ಬಾಲಕ ಪ್ರತಿ ಪ್ಯಾಕೆಟ್ಗೆ 30 ರೂಪಾಯಿ ಎಂದು ಹೇಳಿದ್ದು, ಆ ವ್ಯಕ್ತಿ ಅದನ್ನು 5 ರೂಪಾಯಿಗೆ ಖರೀದಿಸಲು ಮುಂದಾದರು. ಬಾಲಕ ಆರಂಭದಲ್ಲಿ ಸ್ವಲ್ಪ ಹಿಂಜರಿದನಾದರೂ ನಂತರ ಒಪ್ಪಿಕೊಂಡಿದ್ದು, ಆದರೆ, ಆ ವ್ಯಕ್ತಿ ಅವನಿಗೆ 500 ರೂಪಾಯಿ ನೀಡಿದಾಗ ಬಾಲಕ ಆಶ್ಚರ್ಯಚಕಿತನಾಗಿದ್ದಾನೆ. ಬಾಲಕ ತನ್ನ ಸ್ವಾಭಿಮಾನವನ್ನು ಪ್ರದರ್ಶಿಸುತ್ತಾ, “ನಾನು ಕೆಲಸ ಮಾಡುತ್ತೇನೆ, ಬೇಡಿಕೊಳ್ಳುವುದಿಲ್ಲ” ಎಂದಿದ್ದು ನೆಟ್ಟಿಗರು ಮೆಚ್ಚಿಕೊಳ್ಳುವಂತೆ ಮಾಡಿದೆ.
ಬಾಲಕನ ಈ ಘನತೆಯನ್ನು ಕಂಡು ಆ ವ್ಯಕ್ತಿ ಪ್ರಭಾವಿತನಾಗಿ, ತನ್ನ ತಾಯಿಯಿಂದ ಈ ಹಣವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದು, ಸ್ವಲ್ಪ ಮನವೊಲಿಸಿದ ನಂತರ ಬಾಲಕ ಒಪ್ಪಿಕೊಂಡಿದ್ದಾನೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಈ ಬಾಲಕನ ಸ್ವಾಭಿಮಾನವನ್ನು ಹೊಗಳಿದ್ದಾರೆ.
View this post on Instagram