ಹಾವೇರಿ: ರಾಜ್ಯದಲ್ಲಿ ಫೈನಾನ್ಸ್, ಮೈಕ್ರೋ ಫೈನಾನ್ಸ್ ನವರ ಕಿರುಕುಳ ಮಿತಿ ಮೀರಿದ್ದು, ನೊಂದ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಿರಾಣಿ ಅಂಗಡಿ ಮಾಲೀಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ.
36 ವರ್ಷದ ನಾಗಪ್ಪ ಗುಂಜಾಳ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಿರಾಣಿ ಅಂಗಡಿ ನಡೆಸಲು ವಿವಿಧ ಫೈನಾನ್ಸ್ ಗಳಿಂದ 15 ಲಕ್ಷ ಸಾಲ ಪಡೆದಿದ್ದರು. ಮೈಕ್ರೋ ಫೈನಾನ್ಸ್ ನವರು ಮನೆಯ ಬಳಿ ಬಂದು ಕಿರುಕುಳ ನೀಡುತ್ತಿದ್ದರು. ಅವಮಾನಕ್ಕೆ ನಾಗಪ್ಪ ತೀವ್ರವಾಗಿ ನೊಂದು ಮನೆಗೆ ರಾತ್ರಿ ಬಂದು ಊಟ ಮಾಡಿ ಪುಟ್ಟ ಮಗನನ್ನು ನೋಡಿಕೊಂಡು ಬೇರೆಡೆ ಹೋಗಿ ಇರುತ್ತಿದ್ದರು.
ಇದೀಗ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನ್ರೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಕ್ರೋ ಫೈನಾನ್ಸ್ ನವರ ಕಾಟದಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತ್ನಿ ಆರೋಪಿಸಿದ್ದಾರೆ.