ಹುಬ್ಬಳ್ಳಿ: ಆಟವಾಡುವಾಗಲೇ ಮನೆಯ ಮುಂದಿನ ನೀರಿನ ಟ್ಯಾಂಕ್ ಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಗಾಮನಗಟ್ಟಿ ಪ್ರದೇಶದಲ್ಲಿ ನಡೆದಿದೆ.
ಮೂರು ವರ್ಷದ ದೀಪಾ ನೀರಿಗೆ ಬಿದ್ದು ಮೃತಪಟ್ಟ ಮಗು ಎಂದು ಹೇಳಲಾಗಿದೆ. ದೀಪಾ ಬುಡರಸಿಂಗಿಯ ಭೀಮಪ್ಪ ಜಿಗಳೂರು ಎಂಬುವರ ಪುತ್ರಿಯಾಗಿದ್ದಾರೆ. ಅಜ್ಜ ಸಿದ್ದಪ್ಪ ಕರಡಿಗುಡ್ಡ ಅವರ ಮನೆಗೆ ಬಂದಿದ್ದ ವೇಳೆಯಲ್ಲಿ ಘಟನೆ ನಡೆದಿದೆ. ಮನೆಯ ಮುಂದೆ ಆಟವಾಡಿಕೊಂಡಿದ್ದ ದೀಪಾ ಆಕಸ್ಮಿಕವಾಗಿ ನೀರಿಗೆ ಬಿದ್ದು, ಸಾವನ್ನಪ್ಪಿದ್ದಾಳೆ.
ಮಗು ದೀಪಾ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.