ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ, ನ್ಯಾಷನಲ್ ಕಾಣ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಗುರುವಾರ ಕತ್ರಾದಲ್ಲಿ ‘ಮಾತಾ ಶೇರಾ ವಾಲಿ’ಗೆ ಸಮರ್ಪಿತವಾದ ಭಜನೆಯಲ್ಲಿ ಭಾಗವಹಿಸಿದ್ದಾರೆ.
ಅವರು ಅನಿರೀಕ್ಷಿತ ನಡೆ ಮತ್ತು ಪ್ರದರ್ಶನದೊಂದಿಗೆ ಭಕ್ತರನ್ನು ಆಕರ್ಷಿಸಿದ್ದಾರೆ. ಅವರ ಅಪರೂಪದ ಮತ್ತು ಹೃದಯಸ್ಪರ್ಶಿ ಕಾರ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವೀಕ್ಷಕರು ಹಿರಿಯ ರಾಜಕಾರಣಿ ಫಾರೂಕ್ ಅಬ್ದುಲ್ಲಾ ಅವರ ಆಧ್ಯಾತ್ಮಿಕ ನಡೆಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕತ್ರಾದ ಆಶ್ರಮದಲ್ಲಿ ನಡೆದ ‘ಭಜನೆ’ ಕಾರ್ಯಕ್ರಮದಲ್ಲಿ ಗಾಯಕ ಮತ್ತು ಮಕ್ಕಳೊಂದಿಗೆ ಸೇರಿ ಫಾರೂಕ್ ಬ್ದುಲ್ಲಾ ಹಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ಲಾ, ರೋಪ್‌ವೇ ಯೋಜನೆಯ ವಿರುದ್ಧದ ಪ್ರತಿಭಟನೆ ನಡೆಸುತ್ತಿರುವ ಕತ್ರಾ ಜನರಿಗೆ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಾಚರಣೆಗಳನ್ನು ನಡೆಸುವವರು ಸ್ಥಳೀಯ ಜನರ ಹಿತಾಸಕ್ತಿಗಳಿಗೆ ಹಾನಿ ಮಾಡುವ ಅಥವಾ ಅವರಿಗೆ ಸಮಸ್ಯೆಗಳನ್ನು ಸೃಷ್ಟಿಸುವ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದರು.
ಕತ್ರಾದಲ್ಲಿ ನಡೆಯುತ್ತಿರುವ ರೋಪ್‌ವೇ ನಿರ್ಮಾಣದ ಸಮಸ್ಯೆಯನ್ನು ಅಬ್ದುಲ್ಲಾ ಪ್ರಸ್ತಾಪಿಸಿ, ಮಾತಾ ವೈಷ್ಣೋ ದೇವಿ ದೇಗುಲದ ಕಾರ್ಯಾಚರಣೆಗೆ ಕಾರಣರಾದವರು ಜನರಿಗೆ ಸಮಸ್ಯೆಗಳನ್ನು ಉಂಟುಮಾಡುವ ಕ್ರಮಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ನಗರದ ಹಿತಾಸಕ್ತಿಗಳನ್ನು ಪರಿಗಣಿಸದೆ ರೋಪ್‌ವೇ ನಿರ್ಮಿಸಿದ್ದಕ್ಕಾಗಿ ಅವರು ಮಂಡಳಿಯನ್ನು ಟೀಕಿಸಿದ್ದಾರೆ.
#WATCH | Katra | National Conference leader Farooq Abdullah was seen singing the bhajan ‘Tune Mujhe Bulaya Sherawaliye’ in Katra (23.01) pic.twitter.com/LaRwlHH2rR
— ANI (@ANI) January 24, 2025