ಬೆಂಗಳೂರು : ಪತ್ನಿ ಮನೆಗೆ ಬರಲಿಲ್ಲ ಎಂದು ಪತ್ನಿ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ಮಾಸುವ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.ಮಂಜುನಾಥ್ (39) ಮೃತ ದುರ್ದೈವಿ. ಮಂಜುನಾಥ್ ಮೂಲತಃ ಕುಣಿಗಲ್ನವರಾಗಿದ್ದು, ಸ್ವಂತ ಕ್ಯಾಬ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಹಾಗೂ ಇವರಿಗೆ 9 ವರ್ಷದ ಮಗು ಸಹ ಇತ್ತು. ಗಂಡ-ಹೆಂಡತಿ ಡಿವೋರ್ಸ್ ಮೊರೆ ಹೋಗಿದ್ದರು.
ಇಂದು ಪತ್ನಿ ವಾಸವಿದ್ದ ಮನೆ ಬಳಿ ಬಂದಿದ್ದ ಮಂಜುನಾಥ್ ನಯನಾಳನ್ನ ಮನವೊಲಿಸಲು ಮುಂದಾಗಿದ್ದ. ಆದ್ರೆ ಆಕೆ ಒಪ್ಪದೇ ಇದ್ದಾಗ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥ್ ಪತ್ನಿಯನ್ನು ಮನೆಗೆ ಕರೆದಿದ್ದಾನೆ, ಆದರೆ ಪತ್ನಿ ನೀನು ಹಿಂದೆ ಕೊಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ನಾನು ಬರೋದಿಲ್ಲ ಎಂದಿದ್ದಾಳೆ. ಇದರಿಂದ ಮನನೊಂದ ಮಂಜುನಾಥ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸ್ತಿದ್ದಾರೆ.