ಬೆಂಗಳೂರು: ಹಾಸನದ ಸಕಲೇಶಪುರದಿಂದ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿಗಳು ಮೈಸೂರಿನಲ್ಲಿ ಪತ್ತೆಯಾಗಿರುವ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಮಲೈಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಜನವರಿ 18ರಂದು ಬೆಂಗಳೂರಿನ ಜಯನಗರದ ಮೂರನೇ ಹಂತದ ಮನೆ ಬಳಿ ಆಟವಾಡುತ್ತಿದ್ದ ಪ್ರವೀಣ್ ಹಾಗೂ ರವಿ ಎಂಬ ಇಬ್ಬರು ಮಕ್ಕಳಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಇದೀಗ ಇಬ್ಬರು ಮಕ್ಕಳು ಚಾಮರಾಜನಗರದ ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ಪತ್ತೆಯಾಗಿದ್ದಾರೆ.
ಜಯನಗರದ ನಿವಾಸಿಗಳಾದ ವಿದ್ಯಾಶ್ರೀ ಹಾಗೂ ಮಹೇಶ್ ದಂಪತಿಯ ಪುತ್ರ ಪ್ರವೀಣ್, ಜಯನಗರದ ಎಂಇ ಎಸ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ. ಬಾಲಕ ರವಿ 9ನೇ ತರಗತಿ ಓದುತ್ತಿದ್ದ. ಮಕ್ಕಳ ನಾಪತ್ತೆ ಬಗ್ಗೆ ಪೋಷಕರು ತಿಲಕನಗರ ಠಾಣೆಯಲ್ಲಿ ದೂರು ನೀಡಿದ್ದರು. ಜಯನಗರದಿಂದ ನಾಪತ್ತೆಯಾಗಿದ್ದ ಮಕ್ಕಳಿಬ್ಬರೂ ಮಲೈಮಹದೇಶ್ವರ ಬೆಟ್ಟದಲ್ಲಿ ಪತ್ತೆಯಾಗಿದ್ದಾರೆ.