Shocking: ಮೊದಲ ರಾತ್ರಿಗೂ ಮುನ್ನ ವಧುವಿಗೆ ʼಕನ್ಯತ್ವʼ ಪರೀಕ್ಷೆ; ನ್ಯಾಯಾಲಯದಿಂದ ತನಿಖೆಗೆ ಆದೇಶ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಬ್ಬ ಮಹಿಳೆ ತಮ್ಮ ಅತ್ತೆ ತನ್ನ ಮೇಲೆ ಕನ್ಯತ್ವ ಪರೀಕ್ಷೆ ನಡೆಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಜಿಲ್ಲಾ ನ್ಯಾಯಾಲಯ ಈ ಅಮಾನವೀಯ ಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಿದೆ.

ಈ ಮಹಿಳೆ ಮದುವೆಯ ರಾತ್ರಿ ತನ್ನ ಅತ್ತೆ ಅನುಚಿತ ರೀತಿಯಲ್ಲಿ ಕನ್ಯತ್ವ ಪರೀಕ್ಷೆ ನಡೆಸಲು ಪ್ರಯತ್ನಿಸಿದ್ದರಿಂದ ತನಗೆ ತೀವ್ರ ಮಾನಸಿಕ ಮತ್ತು ದೈಹಿಕ ನೋವುಂಟಾಯಿತು ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕನ್ಯತ್ವ ಪರೀಕ್ಷೆಗಳನ್ನು ಕಾನೂನುಬದ್ಧವಾಗಿ ಪ್ರಶ್ನಿಸಿದ ಮೊದಲ ಪ್ರಕರಣ ಇದಾಗಿದೆ.

2019ರ ಡಿಸೆಂಬರ್‌ನಲ್ಲಿ ಭೋಪಾಲ್‌ನ ವ್ಯಕ್ತಿಯನ್ನು ವಿವಾಹವಾದ ಈ ಮಹಿಳೆಗೆ ಮದುವೆಯಾದ ಮೂರು ತಿಂಗಳೊಳಗೆ ಗರ್ಭಪಾತವಾಗಿದೆ. ನಂತರ, ಒಂಬತ್ತು ತಿಂಗಳು ಮತ್ತು ಒಂಬತ್ತು ದಿನಗಳ ಕಾಲ ಗರ್ಭಧರಿಸಿದ ನಂತರ, ಆಕೆ ಮೃತ ಮಗುವನ್ನು ಹೆತ್ತಿದ್ದರು. ಪ್ರಸ್ತುತ, ಅವರಿಗೆ ಒಬ್ಬ ಮಗಳು ಇದ್ದಾಳೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತನಿಖಾಧಿಕಾರಿಯ ಗೌಪ್ಯ ವರದಿಯ ಪ್ರಕಾರ, ಮದುವೆಯ ಮೊದಲ ರಾತ್ರಿಯಂದು ಮಹಿಳೆಯ ಕನ್ಯತ್ವವನ್ನು ಪರಿಶೀಲಿಸಲು ಅತ್ತೆ ಅನುಚಿತ ವಿಧಾನಗಳನ್ನು ಬಳಸಿದ್ದರಿಂದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read