ಪ್ರಯಾಗರಾಜ್: ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಎಂದೇ ಖ್ಯಾತಳಾಗಿದ್ದ ಯುವತಿಯನ್ನು ನಿರಂತರವಾಗಿ ಚಿತ್ರೀಕರಿಸುತ್ತಿದ್ದ ವ್ಲಾಗರ್ಗಳಿಂದ ಬೇಸತ್ತು ಒಬ್ಬರ ಫೋನ್ ಕಸಿದುಕೊಂಡು ನೆಲಕ್ಕೆ ಎಸೆದ ಘಟನೆ ನಡೆದಿದೆ.
ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಸೌಂದರ್ಯಕ್ಕೆ ಮರುಳಾಗಿದ್ದ ಜನರು ಅವರನ್ನು ಚಿತ್ರೀಕರಿಸುತ್ತಿದ್ದರು. ಆದರೆ ಈ ನಿರಂತರ ಚಿತ್ರೀಕರಣದಿಂದ ಅವರು ಬೇಸತ್ತಿದ್ದು, ಕೋಪಗೊಂಡು ಒಬ್ಬ ವ್ಲಾಗರ್ನ ಫೋನ್ನ್ನು ಕಸಿದುಕೊಂಡು ನೆಲಕ್ಕೆ ಎಸೆದಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಹಾಕುಂಭ ಮೇಳದಲ್ಲಿ ಮೊನಾಲಿಸಾ ಅವರ ಸೌಂದರ್ಯಕ್ಕೆ ಮರುಳಾಗಿದ್ದ ಹಲವರು ಅವರನ್ನು ಚಿತ್ರೀಕರಿಸುವುದಕ್ಕಾಗಿ ಮಾತ್ರ ಬಂದು ರುದ್ರಾಕ್ಷಿ ಖರೀದಿಸುತ್ತಿರಲಿಲ್ಲ. ಇದರಿಂದಾಗಿ ಅವರ ವ್ಯಾಪಾರದ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಅವರನ್ನು ಮತ್ತೆ ಅವರ ಮನೆಗೆ ಕಳುಹಿಸಲಾಗಿದೆ.
View this post on Instagram
A girl in Mahakumbh Mela is stealing the heart of the people😍
The girl whose name is Monalisa Bhonsle, came to Mahakumbh Mela in Prayagraj (UP) from Indore (MP) to sell her handmade garlands (Mala), has become an internet sensation because of her natural beauty. People are… pic.twitter.com/wj5sNaW1da
— Alok Ranjan Singh (@withLoveBharat) January 17, 2025