ಕೊಯಮತ್ತೂರಿನ ಒಂದು ಮನೆಯಲ್ಲಿ ಆನೆಯೊಂದು ನುಸುಳಿದ ಘಟನೆ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯಲ್ಲಿ ವಾಸವಾಗಿದ್ದ ನಾಲ್ವರು ಕಾರ್ಮಿಕರು ಆಘಾತಕ್ಕೊಳಗಾಗಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಆನೆ ಮನೆಯೊಳಗೆ ನುಸುಳಿ ಅಲ್ಲಿರುವ ವಸ್ತುಗಳನ್ನು ಸ್ಪರ್ಶಿಸುವ ದೃಶ್ಯಗಳು ದಾಖಲಾಗಿದೆ. ಆನೆಯು ಅಕ್ಕಿಯ ಚೀಲವನ್ನು ತೆಗೆದುಕೊಂಡು ಹೋಗುವ ದೃಶ್ಯವೂ ಇದೆ.
🐘🇮🇳 An elephant makes a surprise visit in Coimbatore, India, grabs a packet of rice, and exits in style! 👀 #Elephant #Coimbatore #India #Viral pic.twitter.com/7Tv5drJiuy
— Live Updates (@LiveupdatesUS) January 19, 2025