ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗಣೇಶ್, ಶರವಣ ಎಂದು ಗುರುತಿಸಲಾಗಿದೆ. ಇಬ್ಬರು ಕೆ ಆರ್ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಭಾನುವಾರ ತಡ ರಾತ್ರಿ 11:30 ಸುಮಾರಿಗೆ ಈ ಘಟನೆ ನಡೆದಿದೆ.
ಮನೆಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಕರೆದೊಯ್ದು ಗ್ಯಾಂಗ್ ಸಾಮೂಹಿಕ ಅತ್ಯಾಚಾರ ಎಸಗಿದೆ.
ರೇಪ್ ಮಾಡಿದ ದುಷ್ಕರ್ಮಿಗಳು ಮಹಿಳೆಯನ್ನು ಬೆದರಿಸಿ ಮೊಬೈಲ್, ಹಣ, ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ. ಮಹಿಳೆಯನ್ನ ಕೆಆರ್ ಮಾರುಕಟ್ಟೆಯ ಗೋಡೌನ್ ಸ್ಟ್ರೀಟ್ ಗೆ ಎಳೆದೊಯ್ದು ಅತ್ಯಾಚಾರ ಎಸಗಿ ದರೋಡೆ ನಡೆಸಲಾಗಿದೆ.
ಮಹಿಳೆ ಭಾನುವಾರ ರಾತ್ರಿ ಯಲಹಂಕಕ್ಕೆ ಹೋಗಲು ಕೆಆರ್ ಮಾರುಕಟ್ಟೆಯಲ್ಲಿ ಬಸ್ ಕಾಯುತ್ತಿದ್ದರು. ಈ ವೇಳೆ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ಕಾಮುಕನೋರ್ವ ಬಸ್ ಬಗ್ಗೆ ಮಹಿಳೆಗೆ ತಿಳಿಸಿದ್ದಾನೆ. ಬಸ್ ತೋರಿಸುವುದಾಗಿ ಸುಳ್ಳು ಹೇಳಿದ ಕಾಮುಕ ಗೋಡನ್ ಬಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಅತ್ಯಾಚಾರ ಎಸಗಲಾಗಿದೆ.ನಂತರ ಸಂತ್ರಸ್ತ ಮಹಿಳೆ ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.