ಬೆಂಗಳೂರು: ಬೆಂಗಳೂರಿನ ಈಜಿಪುರ ಬಳಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಬೈಕ್ ಐದಾರು ಮೀಟರ್ ಎಳೆದೊಯ್ದಿದೆ. ಓರ್ವ ಬೈಕ್ ಸವಾರ ಎಡಭಾಗದಲ್ಲಿ ಹೋಗುತ್ತಿದ್ದವನು ಇದ್ದಕ್ಕಿದ್ದಂತೆ ವೇಗವಾಗಿ ಬಲಭಾಗಕ್ಕೆ ಬಂದಿದ್ದಾನೆ. ಇದೇ ವೇಳೆ ಹಿಂದಿನಿಂದ ಬಲಭಾಗದಲ್ಲಿ ಬರುತ್ತಿದ್ದ ಮತ್ತೊಂದು ಬೈಕ್ ಮುಂದಿನ ಬೈಕ್ ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಓರ್ವ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮತ್ತೋರ್ವ ಬೈಕ್ ಸವಾರ ಮೂರು ಬಾರಿ ಪಲ್ಟಿಯಾಗಿ ಬಿದ್ದಿದ್ದಾನೆ.
ಇದೇ ವೇಳೆ ಬೈಕ್ ಗಳ ಹಿಂದೆ ಕಾರೊಂದು ಬರುತ್ತಿದ್ದು, ಕಾರು ಚಾಲಕ ತನ್ನ ಸಮಯ ಪ್ರಜ್ಞೆಯಿಂದ ತಕ್ಷಣ ಕಾರು ನಿಲ್ಲಿಸಿದ್ದಾನೆ. ಇಬ್ಬರು ಬೈಕ್ ಸವಾರರು ಹೆಲ್ಮೆಟ್ ಧರಿಸಿದ್ದರಿಂದ ಅಪಘಾತದಲ್ಲಿ ಬಚಾವ್ ಆಗಿದ್ದಾರೆ.