ಬೆಂಗಳೂರು : ಶಾಲಾ ಆವರಣ ಹಾಗೂ ಕಟ್ಟಡಗಳಲ್ಲಿ ಜಾಹಿರಾತು ಫಲಕ ಅಳವಡಿಕೆ ನಿಷೇಧ ಮಾಡಲಾಗಿದೆ.
ಶಿಕ್ಷಣ ಇಲಾಖೆಯ ಖಾಲಿ ಜಾಗ ಕಟ್ಟಡದಲ್ಲಿ ವಾಣಿಜ್ಯ ಜಾಹೀರಾತು ಫಲಕಗಳನ್ನು ಆಳವಡಿಸುವುದು ಸರ್ಕಾರದ ನೀತಿಗೆ ವಿರುದ್ಧವಾಗಿರುತ್ತದೆ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಶಾಲೆಗಳ ಆವರಣ ಹಾಗೂ ಕಟ್ಟಡಗಳಲ್ಲಿ ವಾಣಿಜ್ಯ ಜಾಹೀರಾತು ಫಲಕಗಳನ್ನು ಅಳವಡಿಸಲು ಅವಕಾಶ ನೀಡಬಾರದೆಂದು ಸೂಚಿಸಿದೆ. ಅಲ್ಲದೆ, ಪ್ರಸ್ತಾಪಿತ ವಿಷಯದ ಕುರಿತು ಪ್ರಸ್ತಾವನೆಗಳನ್ನು ಸ್ವೀಕರಿಸಿದಲ್ಲಿ ತಮ್ಮ ಹಂತದಲ್ಲಿಯೇ ಅರ್ಜಿದಾರರಿಗೆ ಹಿಂಬರಹ ನೀಡುವುದು ಎಂದು ಇಲಾಖೆ ಸೂಚನೆ ನೀಡಿದೆ.