ಬೆಂಗಳೂರು: ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಉಚಿತವಾಗಿ ತಿದ್ದುಪಡಿ ಮಾಡಿಕೊಡುತ್ತಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇನ್ನು ಮುಂದೆ ತಿದ್ದುಪಡಿಗೆ 1600 ರೂ. ಶುಲ್ಕ ವಿಧಿಸುವುದಾಗಿ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳ ಹೆಸರು, ತಂದೆ, ತಾಯಿ ಹೆಸರು, ಜನ್ಮ ದಿನಾಂಕಗಳಲ್ಲಿ ಕೆಲವೊಮ್ಮ ತಪ್ಪಾಗುತ್ತವೆ. ಇವುಗಳನ್ನು ಮಂಡಳಿ ಗಮನಕ್ಕೆ ತಂದಾಗ ಪ್ರತಿ ವರ್ಷ ನಿರಂತರ ಪ್ರಕ್ರಿಯೆಯಾಗಿ ತಪ್ಪುಗಳನ್ನು ತಿದ್ದುಪಡಿ ಮಾಡಿ ಪರಿಷ್ಕೃತ ಅಂಕಪಟ್ಟಿ ವಿತರಿಸುವುದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಾಮಾನ್ಯ ಕೆಲಸವಾಗಿದೆ.
ಆದರೆ, ಇದೇ ಮೊದಲ ಬಾರಿಗೆ 1600 ರೂ. ಶುಲ್ಕ ವಿಧಿಸುತ್ತಿರುವುದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಮಂಡಳಿಯ ಹೊಸ ನಿಯಮದ ವಿರುದ್ಧ ಪೋಷಕರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.