ಬೆಂಗಳೂರು: ಇಲ್ಲೋರ್ವ ಮಗ ಮಹಾಶಯನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.
ರಾಜಾಜಿನಗರದ 4ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ಜನವರಿ 10ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಂದೆ ರಾಮಚಂದ್ರಪ್ಪ (59) ಕೊಲೆಯಾಗಿರುವ ವ್ಯಕ್ತಿ. ರಘು ತಂದೆಯನ್ನೇ ಕೊಂದ ಮಗ.
ಮಗ ರಘು ನಿತ್ಯವೂ ಕುಡಿದುಬಂದು ಗಲಾಟೆ ಮಡುತ್ತಿದ್ದ. ಇದಕ್ಕೆ ತಂದೆ ಬೈದು ಬುದ್ಧಿಹೇಳಿದ್ದರು. ತಂದೆ ಬುದ್ಧಿವಾದ ಕೇಳಿ ತಿದ್ದಿಕೊಳ್ಳುವುದನ್ನು ಬಿಟ್ಟು, ಕೋಪದ ಬರದಲ್ಲಿ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.