ವಿಜಯಪುರ: ಬೊಲೆರೋ ಪಿಕಪ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನ ರುಂಡವೇ ತುಂಡಾಗಿ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ವಜ್ರಮುನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಆತನ ರುಂಡ ದೇಹದಿಂದ ಬೇರ್ಪಟ್ಟು ಮತ್ತೊಂದು ಕಡೆ ಬಿದ್ದಿದೆ. ರಾಯಚೂರು ಮೂಲದ ವಜ್ರಮುನಿ ಕಬ್ಬು ಕಟಾವು ಮಾಡಲೆಂದು ವಿಜಯಪುರಕ್ಕೆ ಬಂದಿದ್ದ ಈ ವೇಳೆ ವಿಜಯಪುರದ ನಿಡಗುಂದಿ ರಸ್ತೆಯಲ್ಲಿ ಪಿಕಪ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಈ ದುರಂತ ನಡೆದಿದೆ.
ಘಟನಾ ಸ್ಥಳಕ್ಕೆ ಬಸವನಬಾಗೇವಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.