ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಕೃತ್ಯದ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಹುಬ್ಬಳ್ಳಿಯ ಕಸಬಾ ಠಣೆ ಪೊಲೀಸರು ಆರೋಪಿಯನ್ನು ಬ್ಂಧಿಸಿದ್ದಾರೆ. 38 ವರ್ಷದ ಅಶ್ಪಾಕ್ ಜೋಗನ್ ಕೊಪ್ಪ ಬಂಧಿತ ಆರೋಪಿ. ಈತ ಅಪ್ರಾಪ್ತ ಬಾಲಕಿ ಮಾತ್ರವಲ್ಲ ಹಲವು ಮಹಿಳೆಯರ ಮೇಲೂ ಅತ್ಯಾಚಾರವೆಸಗಿ ನೀಚ ಕೃತ್ಯವೆಸಗಿದ್ದ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಹಲವು ವಿಡಿಯೋಗಳು ಆತನ ಮೊಬೈಲ್ ನಲ್ಲಿ ಪತ್ತೆಯಾಗಿದೆ. ಆರೋಪಿ ಅಶ್ಪಾಕ್, ಹುಬ್ಬಳ್ಳಿಯ ಟಿಪ್ಪುನಗರದಲ್ಲಿ ಝರಾಕ್ಸ್ ಅಂಗಡಿ ಹಾಗೂ ಮೊಬೈಲ್ ರಿಚಾರ್ಜ್ ಅಂಗಡಿ ಇಟ್ಟುಕೊಂಡಿದ್ದಾನೆ. ತನ್ನ ಅಂಗಡಿಗೆ ಬರುವ ಬಡ ಹುಡುಗಿಯರ ಜೊತೆ ಬಣ್ಣ ಬಣ್ಣದ ಮಾತುಗಳನ್ನಾಡಿ ಅವರೊಂದಿಗೆ ಸ್ನೇಹ ಬೆಳೆಸಿ ಬಳಿಕ ಹಣದಾಸೆ ತೋರಿಸಿ ಪ್ರೀತಿ ಪ್ರೇಮದ ನಾಟಕವಾಡಿ ಮಂಚಕ್ಕೆ ಕರೆದು ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ.
ಈತನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ಪೋಷಕರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಮುಕ ಅರೆಸ್ಟ್ ಆಗಿದ್ದು, ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.