ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಪಕ್ಷದಿಂದ ಉಚ್ಛಾಟನೆ ಮಡಬೇಕು ಎಂದು ಬಿಜೆಪಿಕಾರ್ಯಕರ್ತರೇ ಒತ್ತಾಯಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಮೂರು ತಿಂಗಳಿಂದ ಪ್ರತಾಪ್ ಸಿಂಹ ನೀಡುತ್ತಿರುವ ಹೇಳಿಕೆಗಳು, ನಡೆದಿರುವ ಘಟನೆಗಳಿಂದಾಗಿ ಕಾರ್ಯಕರ್ತರು ಬೇಸರಗೊಂಡಿದ್ದು, ಹೀಗಾಗಿ ಪ್ರತಾಪ್ ಸಿಂಹ ಉಚ್ಚಾಟನೆ ಮಡುವಂತೆ ಮನವಿ ಪತ್ರ ಸಲ್ಲಿಸಿದ್ದರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಯಧುವೀರ್ ಒಡೆಯರ್, ಕಾರ್ಯಕರ್ತರ ಮನವಿ ಪತ್ರದ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ವೈಯಕ್ತಿಕವಾಗಿ ಯಾರೂ ಪಕ್ಷ ಬಿಟ್ಟು ಹೋಗುವುದಕ್ಕೆ ಇಷ್ಟವಿಲ್ಲ. ವಿಪಕ್ಷ ಸ್ಥಾನದಲ್ಲಿರುವ ನಾವು ಒಟ್ಟಾಗಿ ಹೋರಾಟ ಮಾಡಬೇಕು. ಎಲ್ಲವನ್ನೂ ತಿದ್ದಿಕೊಂಡು ಒಟ್ಟಾಗಿ ಸಗುವ ಕಾಲವಿದು ಎಂದು ಹೇಳಿದರು.