ಕುಲದೀಪ್ ಕಾರಿಯಪ್ಪ ನಿರ್ದೇಶನದ ನವೀನ್ ಶಂಕರ್ ಅಭಿನಯದ ಬಹುನಿರೀಕ್ಷಿತ ‘ನೋಡಿದವರು ಏನಂತಾರೆ’ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಈ ಟ್ರೈಲರ್ ಗೆ ಸಾಕಷ್ಟು ಮೆಚ್ಚುಗೆ ದೊರೆತಿದ್ದು ಭರ್ಜರಿ ವೀಕ್ಷಣೆ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ನವೀನ್ ಶಂಕರ್ ಗೆ ಜೋಡಿಯಾಗಿ ಅಪೂರ್ವ ಭಾರದ್ವಾಜ್ ಅಭಿನಯಿಸಿದ್ದು, ಪದ್ಮಾವತಿ ರಾವ್ (ಅಕ್ಷತಾ ರಾವ್) ಐರಾ ಕೃಷ್ಣ, ರಾಜೇಶ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದು, ಮನು ಶೇಡ್ಗಾರ್ ಸಂಕಲನ, ಕುಲದೀಪ್ ಕಾರ್ಯಪ್ಪ, ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಸುನಿಲ್ ವೆಂಕಟೇಶ್ ಸಂಭಾಷಣೆ ಹಾಗೂ ಅಶ್ವಿನ್ ಕೆನಡಿ ಛಾಯಾಗ್ರಹಣವಿದೆ. ಮಯೂರೇಶ್ ಅಧಿಕಾರಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.