ಬೆಂಗಳೂರು: ಸರ್ಕಾರಿ ನೌಕರರ ವೇತನ ವಿಳಂಬದ ಸಂದರ್ಭದಲ್ಲಿ ಕೆಜಿಐಡಿ ವಿಮೆ, ಸಾಲ ಮರುಪಾವತಿಗೆ ವಿಧಿಸುತ್ತಿರುವ ಬಡ್ಡಿ ಕೈ ಬಿಡಬೇಕೆಂದು ಹಣಕಾಸು ಇಲಾಖೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಈ ಕುರಿತಾಗಿ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ವೇತನ ಪಾವತಿ ಅಧಿಕಾರಿ ವರ್ಗಾವಣೆ, ಡಿಜಿಟಲ್ ಸಹಿ ಬದಲಾವಣೆ, ಕೆ-2ಟು ಹಾಗೂ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿನ ತಾಂತ್ರಿಕ ದೋಷ, ಅನುದಾನದ ಕೊರತೆ, ಅನುದಾನ ಬಿಡುಗಡೆ ವಿಳಂಬದಂತಹ ಸಂದರ್ಭದಲ್ಲಿ ಎರಡು ಮೂರು ತಿಂಗಳಿಗೊಮ್ಮೆ ವೇತನ ದೊರೆಯುತ್ತದೆ. ಇಂತಹ ಸಮಯದಲ್ಲಿ ಕೆಜಿಐಡಿ ಕಂತು, ಸಾಲದ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಮಾಡದೆ ಇರುವ ತಪ್ಪುಗಳಿಂದಾಗಿ ನೌಕರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಬಡ್ಡಿ ವಿಧಿಸಿದಂತೆ ತಡೆಯಲು ತಂತ್ರಾಂಶಗಳಲ್ಲಿ ಮಾರ್ಪಾಡು ಮಾಡಬೇಕೆಂದು ಷಡಾಕ್ಷರಿ ಮನವಿ ಮಾಡಿದ್ದಾರೆ.