ಬೆಂಗಳೂರು: ಇಂದು ಮೆಟ್ರೋ ಪ್ರಯಾಣ ದರ ಏರಿಕೆ ಶಾಕ್ ನೀಡುವ ಸಾಧ್ಯತೆ ಇದೆ. ಮೆಟ್ರೋ ಪ್ರಯಾಣ ದರ ಏರಿಕೆಯ ಬಗ್ಗೆ ಬಿಎಂಆರ್ಸಿಎಲ್ ನಿಂದ ಇಂದು ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ಮೂಲಕ ಬಸ್ ಪ್ರಯಾಣದರ ಹೆಚ್ಚಳದ ಬೆನ್ನೆಲೆ ಮೆಟ್ರೋ ಪ್ರಯಾಣ ದರ ಕೂಡ ಏರಿಕೆಯಾಗಲಿದ್ದು, ಮೆಟ್ರೋ ಟಿಕೆಟ್ ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ. ಶೇಕಡ 105 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾಪವಿದ್ದು, ಶೇಕಡ 40 ರಿಂದ 45ರಷ್ಟು ಪ್ರಯಾಣದ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಕನಿಷ್ಠ ದರ 10 ರೂಪಾಯಿ ಮುಂದುವರೆಯಲಿದ್ದು, ಗರಿಷ್ಠ ದರ 60 ರಿಂದ 90 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.