ಮುಂಬೈ: ಎಲ್ಲಾ ಖಾತೆಗಳಿಗೆ ನಾಮಿನಿ ಕಡ್ಡಾಯ ಮಾಡಿರುವುದನ್ನು ಖಚಿತಪಡಿಸಿಕೊಳ್ಲುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ ನೀಡಿದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರ ಠೇವಣಿ ಖಾತೆಗಳು, ಸೇಫ್ಟಿ ಲಾಕರ್ ಗಳಿಗೆ ನಾಮಿನಿ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಶುಕ್ರವಾರ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಠೇವಣಿದಾರರು ಮೃತರಾದ ಸಂದರ್ಭದಲ್ಲಿ ಕ್ಲೇಮ್ ಗಳನ್ನು ಬೇಗನೆ ಇತ್ಯರ್ಥಪಡಿಸಲು ಇದರಿಂದ ಅನುಕೂಲವಾಗುತ್ತದೆ. ಆರ್ಬಿಐ ವಿಶ್ಲೇಷಣೆಯ ಪ್ರಕಾರ ಭಾರಿ ಸಂಖ್ಯೆಯ ಠೇವಣಿ ಖಾತೆಗಳಿಗೆ ನಾಮಿನಿಗಳೇ ಇಲ್ಲ. ಇದರಿಂದ ಗ್ರಾಹಕರ ಸಾವಿನ ಸಂದರ್ಭದಲ್ಲಿ ಕುಟುಂಬದವರಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಖಾತೆಗಳಿಗೆ ನಾಮಿನಿ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ.