ಹೈದರಾಬಾದ್: ಬೀದರ್ ನಲ್ಲಿ ಹಾಡಹಗಲೇ ಶೂಟ್ ಔಟ್ ಮಾಡಿ 83 ಲಕ್ಷ ರೂ. ದರೋಡೆ ಮಾಡಿದ್ದ ದರೋಡೆಕೋರರು ಮತ್ತೊಬ್ಬ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಹೈದರಾಬಾದ್ ನಲ್ಲಿ ಬಸ್ ಕ್ಲೀನರ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಫ್ಜಲ್ ಗಂಜ್ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದರೋಡೆಕೋರರಿಗಾಗಿ ಬೀದರ್ ಮತ್ತು ಹೈದರಾಬಾದ್ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಅಫ್ಜಲ್ ಗಂಜ್ ಪ್ರದೇಶದಲ್ಲಿ ಪೊಲೀಸರನ್ನು ನೋಡುತ್ತಿದ್ದಂತೆ ದುಷ್ಕರ್ಮಿಗಳು ಖಾಸಗಿ ಬಸ್ ಕ್ಲೀನರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಬೀದರ್ ಪೊಲೀಸರ ಮೇಲೆ ದರೋಡೆಕೋರರು ಫೈರಿಂಗ್ ಮಾಡಿದ್ದು, ಮಿಸ್ ಆಗಿ ಖಾಸಗಿ ಬಸ್ ಕ್ಲೀನರ್ ಗೆ ಗುಂಡು ತಗುಲಿದೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.