ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದಲ್ಲಿ ಗುರುವಾರ ಮುಂಜಾನೆ 2: 30 ರ ಸುಮಾರಿಗೆ ದುಷ್ಕರ್ಮಿ ಚಾಕು ಇರಿದಿದ್ದಾನೆ.
ಘಟನೆಯ ನಂತರ, ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ‘ಸೈಫ್ ಅಲಿ ಖಾನ್’ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದರು.
23 ವರ್ಷದ ಇಬ್ರಾಹಿಂ ತನ್ನ ತಂದೆಯನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ದೀಕ್ಷಿತ್, ಆರೋಪಿಗಳ ಪತ್ತೆಗಾಗಿ 10 ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಕಳೆದ ರಾತ್ರಿ ನಟ ಸೈಫ್ ಅಲಿಖಾನ್ ಮನೆಗೆ ದುಷ್ಕರ್ಮಿಗಳು ನುಗ್ಗಿದ್ದಾರೆ. ದರೋಡೆಗೆ ಯತ್ನಿಸಿದ್ದ ವೇಳೆ ನಟ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದರು.