ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ಎ ತಂಡಗಳ ನಡುವೆ ನಡೆದ ಅಭ್ಯಾಸದ ಟೆಸ್ಟ್ ಪಂದ್ಯ ಡ್ರಾ ನಿಂದ ಅಂತ್ಯಗೊಂಡಿದ್ದು, ನಾಳೆಯಿಂದ ಪ್ರಮುಖ ಟೆಸ್ಟ್ ಆರಂಭವಾಗಲಿದೆ. ಜನವರಿ 17 ರಿಂದ 21 ರವರೆಗೆ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೊದಲ ಟೆಸ್ಟ್ ನಡೆಯಲಿದ್ದು, ಉಭಯ ತಂಡಗಳ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ವೆಸ್ಟ್ ಇಂಡೀಸ್ ತಂಡ; ಕ್ರೈಗ್ ಬ್ರಾಥ್ವೈಟ್ (ನಾಯಕ), ಅಮೀರ್ ಜಂಗೂ, ಮೈಕೆಲ್ ಲೂಯಿಸ್, ಗುಡಾಕೇಶ್ ಮೋಟಿ, ಆಂಡರ್ಸನ್ ಫಿಲಿಪ್, ಕೆಮರ್ ರೋಚ್, ಕೆವಿನ್ ಸಿಂಕ್ಲೇರ್ ಸೀಲ್ಸ್, ಜೋಮೆಲ್ ವಾರಿಕನ್, ಜೋಶುವಾ ಡಾ ಸಿಲ್ವಾ, ಅಲಿಕ್ ಅಥಾನಾಜೆ, ಕೀಸಿ ಕಾರ್ಟಿ, ಜಸ್ಟಿನ್ ಗ್ರೀವ್ಸ್, ಕವೆಮ್ ಹಾಡ್ಜ್, ಟೆವಿನ್ ಇಮ್ಲಾಚ್.
ಪಾಕಿಸ್ತಾನ ತಂಡ; ಶಾನ್ ಮಸೂದ್ (ನಾಯಕ), ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಜ್ವಾನ್, ನೋಮನ್ ಅಲಿ, ರೊಹೇಲ್ ನಜೀರ್, ಸಾಜಿದ್ ಖಾನ್ ಮತ್ತು ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಇಮಾಮ್-ಉಲ್-ಹಕ್, ಕಮ್ರಾನ್ ಗುಲಾಮ್, ಕಾಶಿಫ್ ಅಲಿ, ಖುರ್ರಂ ಶಹಜಾದ್.