ಬೆಂಗಳೂರು: ಬೆಂಗಳೂರಿನಲ್ಲಿ ಡೈಮಂಡ್ ರಿಂಗ್ ಎಗರಿಸಿದ್ದ ಗುಜರಾತ್ ಮೂಲದ ನಕಲಿ ಬಾಬಾ ಸಾಲತ್ ದಿಲೀಪ್ ಎಂಬುವನನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಬಾಬಾ ವೇಷ ಧರಿಸಿ ಬಿಕ್ಷಾಟನೆ ಮಾಡುತ್ತಿದ್ದ ಸಾಲತ್ ಭಿಕ್ಷೆ ಬೇಡುವ ನೆಪದಲ್ಲಿ ಡೈಮಂಡ್ ರಿಂಗ್ ಕಸಿದು ಪರಾರಿಯಾಗಿದ್ದ. ಜನವರಿ 10ರಂದು ಚರ್ಚ್ ಸ್ಟ್ರೀಟ್ ನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಆರೋಪಿ ಬ್ಯಾಂಕ್ ಉದ್ಯೋಗಿ ಉಜ್ವಲ್ ಬಳಿ ಬಂದು ಭಿಕ್ಷೆ ಕೇಳಿದ್ದಾನೆ. ಅವರು ಕೊಡಲು ನಿರಾಕರಿಸಿದಾಗ ಕೈಯಲ್ಲಿದ್ದ ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಡೈಮಂಡ್ ರಿಂಗ್ ಎಗರಿಸಿ ಬಾಯಲ್ಲಿಟ್ಟುಕೊಂಡು ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಉಜ್ವಲ್ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ನಕಲಿ ಬಾಬಾನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಉಂಗುರ ನುಂಗದೇ ಬಾಯಲ್ಲಿಟ್ಟುಕೊಂಡು ಪರಾರಿಯಾಗಿದ್ದು ಬೆಳಕಿಗೆ ಬಂದಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.