ಮಂಡ್ಯ: ನಟ ದರ್ಶನ್ ಮಂಡ್ಯ ಜಿಲ್ಲೆಯ ಪ್ರಸಿದ್ಧ ಆರತಿ ಉಕ್ಕಡಕ್ಕೆ ಭೇಟಿ ನೀಡಿ ಶಕ್ತಿ ದೇವತೆಗೆ ವಿಶೇಶ ಪೂಜೆ ಸಲ್ಲಿಸಿದ್ದಾರೆ.
ಸಂಕಷ್ಟ ನಿವಾರಣೆಗಾಗಿ ಶಕ್ತಿ ದೇವತೆ ಅಹಲ್ಯಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೃಷ್ಟಿ ದೋಷ ಹಾಗೂ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು. ನಟ ದರ್ಶನ್ ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟ ಧನ್ವೀರ್ ಸಾಥ್ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಬೆನ್ನು ನೋವಿನ ಬಗ್ಗೆ ಚಿಕಿತ್ಸೆ ಪಡೆದರು. ಬಳಿಕ ಮೈಸೂರಿನಿಂದ ವಾಪಾಸ್ ಆಗುವ ವೇಳೆ ಮಂಡ್ಯದ ಆರತಿ ಉಕ್ಕಡಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.