ಬೆಳಗಾವಿ: ಚಾಕುವಿನಿಂದ ಇರಿದು ಅತ್ತೆಯನ್ನೇ ಅಳಿಯ ಕೊಲೆ ಮಾಡಿದ ಘಟನೆ ಬೆಳಗಾವಿ ನಗರದ ಖಾಸಬಾಗ್ ನಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಅತ್ತೆಯನ್ನು ಅಳಿಯ ಕೊಲೆ ಮಾಡಿದ್ದಾನೆ. ರೇಣುಕಾ(40) ಕೊಲೆಯಾದವರು ಎಂದು ಹೇಳಲಾಗಿದೆ. ಪತ್ನಿಯ ಚಿಕಿತ್ಸೆಗಾಗಿ ಹಣ ಕೊಡುವಂತೆ ಅಳಿಯ ಶುಭಂ ಬಿರ್ಜೆ ಕೇಳಿದ್ದು, ಅವರು ಹಣ ಕೊಡಲು ನಿರಾಕರಿಸಿದಾಗ ಕೃತ್ಯವೆಸಗಿದ್ದಾನೆ.
ಪತ್ನಿಯ ಚಿಕಿತ್ಸೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದ ಆರೋಪಿ ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಎಳ್ಳು –ಬೆಲ್ಲ ಕೊಡಲು ಬಂದಾಗಲೇ ಅತ್ತೆಯ ಕೊಲೆ ಮಾಡಿದ್ದಾನೆ. ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.