ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಶ್ವದ ಅತಿ ದೊಡ್ಡ ಆಧ್ಯಾತ್ಮಿಕ ಹಬ್ಬ ಮಹಾ ಕುಂಭಮೇಳ ಇಂದಿನಿಂದ ಆರಂಭವಾಗಿದೆ. ಮುಂಜಾನೆಯೇ 25 ಲಕ್ಷಕ್ಕೂ ಅಧಿಕ ಜನರು, ಸಾಧು-ಸಂತರು ನಾಗಾಸಾಧುಗಳು, ಭಕ್ತಾದಿಗಳು ಗಂಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡುವ ಮೂಲಕ ಮಹಾ ಕುಂಭಮೇಳಕ್ಕೆ ಚಾಲನೆ ನೀಡಿದ್ದಾರೆ.
ಈ ಬಾರಿ ಮಹಾ ಕುಂಭಮೇಳಲ್ಲೆ 43 ಕೋಟಿಗೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. 144 ವರ್ಷಗಳ ಬಳಿಕ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳವಿದಾಗಿದ್ದು, ಆದ್ದರಿಂದಲೇ ಇದನ್ನು ಮಹಾ ಕುಂಭಮೇಳ ಎಂದು ಕರೆಯಲಾಗುತ್ತದೆ. ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಈ ಕುಂಭಮೇಳ ವಿಶೇಷತೆ ಪಡೆದುಕೊಂಡಿದೆ. ಸಾಮಾನ್ಯವಾಗಿ ಮಹಾ ಕುಂಭಮೇಲ 12 ವರ್ಷಕ್ಕೊಮ್ಮೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿದೆ.
ಈ ಬಾರಿ ಕುಂಭ ಮೇಳದಲ್ಲಿ 43 ಕೋಟಿಗೂ ಅಧಿಕ ಜನರು ಪುಣ್ಯಸ್ನಾನ ಮಾಡಲಿದ್ದು, 45 ದಿನಗಳ ಕಾಲ ಪ್ರಯಾಗ್ ರಾಜ್ ನಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಆಚರಣೆ ಮೇಳೈಸಲಿದೆ. ದೇಶ-ವಿದೇಶಗಳಿಂದಲು ಲಕ್ಷಾಂತರ ಜನರು ಸಾಗರೀಪಾದಿಯಲ್ಲಿ ಪ್ರಯಾಗ್ ರಾಜ್ ನತ್ತ ಹರಿದು ಬರುತ್ತಿದ್ದು, ಮಹಾ ಕುಂಭ ಎಂಬ ಪ್ರತ್ಯೇಕ ಜಿಲ್ಲೆಯನ್ನೇ ನಿರ್ಮಿಸಲಾಗಿದೆ.
ಮಹಾ ಕುಂಭಮೇಳಕ್ಕೆ ಆಗಮಿಸುವ ಜನರಿಗೆ ಯಾವುದೇ ತೊಂದರೆಗಳಾಗದಂತೆ ಊಟೋಪಚಾರ, ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಉತ್ತರ ಪ್ರದೇಶ ಸರ್ಕಾರ ಕಲ್ಪಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಮಹಾ ಕುಂಭಮೇಳದಲ್ಲಿ ಯಾವುದೇ ಮಾಧಕ ವಸ್ತುಗಳಿಗೆ ಅವಕಾಶವಿಲ್ಲ. ಮಾದಕ ವಸ್ತುಗಳನ್ನು ಸಂಪೂರ್ನ ನಿಷೇಧಿಸಲಾಗಿದೆ.
ಮಹಾ ಕುಂಭಮೇಳ ಹಿನ್ನೆಲೆಯಲ್ಲಿ ಪ್ರಯಾಗ್ ರಾಜ್ ತ್ರಿವೇಣಿ ಸಂಗಮ, ನದಿ ತಟದಲ್ಲಿ ಲಕ್ಷಾಂತರ ನಾಗಾಸಾಧುಗಳು, ಅಘೋರಿಗಳು, ಸಾಧು-ಸಂತರ ವಿಷೇಷವಾದ ಲೋಕವೇ ಅನಾವರಣಗೊಂಡಿದೆ.
ರಾಜಸ್ನಾನ ಅಥವಾ ಶಾಹಿ ಸ್ನಾನ ಮಹಾ ಕುಂಭಮೇಳದಲ್ಲಿ ಅತ್ಯಂತ ಮಂಗಳಕರವಾದ ಸ್ನಾನವಾಗಿದೆ. ಇದನ್ನು ಬೆಳಿಗೆ ಬ್ರಹ್ಮ ಮುಹೂರ್ತ 5:27ರಿಂದ 6:21ರವರೆಗೆ ಮಾಡಬಹುದಾಗಿದೆ. ಬಳಿಕ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಬಳಿಕ ಮಧ್ಯಾಹ್ನ 2: 15ರಿಂದ 2:57ರವರೆಗೆ ಮಡಬಹುದು. ನಂತರ ಸಂಜೆ 5:42ರಿಂದ 6:9ರವರೆಗೆ ಮಾಡಬಹುದಾಗಿದೆ.