ಬೆಂಗಳೂರು : ಬಿಗ್ ಬಾಸ್ ಮನೆಯಿಂದ ‘ಫೈರ್ ಬ್ರ್ಯಾಂಡ್’ ಚೈತ್ರಾ ಕುಂದಾಪುರ ಔಟ್ ಆಗಿದ್ದು, ಕಣ್ಣೀರಿಡುತ್ತಾ ಮನೆಯಿಂದ ಹೊರ ಬಂದಿದ್ದಾರೆ .
ಹೌದು, ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಈ ವಾರ ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿದ್ದಾರೆ . ಮನೆಯಿಂದ ಎಲಿಮಿನೇಟ್ ಆದ ವಿಚಾ ಕೇಳಿ ಚೈತ್ರಾ ಕುಂದಾಪುರ ಅಳುತ್ತಲೇ ಮನೆಗೆ ಗುಡ್ ಬೈ ಹೇಳಿದ್ದಾರೆ.
ಕೊನೇ ಹಂತದಲ್ಲಿ ಮೋಕ್ಷಿತಾ ಪೈ, ಧನರಾಜ್, ಚೈತ್ರಾ ಕುಂದಾಪುರ ಅವರು ಡೇಂಜರ್ ಝೋನ್ಗೆ ಬಂದಿದ್ದರು. ಮೋಕ್ಷಿತಾ ಅವರು ಮೊದಲು ಸೇಫ್ ಆದರು. ನಂತರ ಧನರಾಜ್ & ಚೈತ್ರಾ ಕುಂದಾಪುರ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬ ಕುತೂಹಲವಿತ್ತು, ನಂತರ ಬಿಗ್ ಬಾಸ್ ಮನೆಯಿಂದ ‘ಫೈರ್ ಬ್ರ್ಯಾಂಡ್’ ಚೈತ್ರಾ ಕುಂದಾಪುರ ಔಟ್ ಆಗಿದ್ದು, ಧನರಾಜ್ ಸೇಫ್ ಆಗಿದ್ದಾರೆ. ಬಿಗ್ ಬಾಸ್ ಫೈನಲ್ ಹಂತಕ್ಕೆ ಹೋಗುತ್ತಿದ್ದು, ಕೆಲವೇ ದಿನಗಳಲ್ಲಿ ಫಿನಾಲಿ ನಡೆಯಲಿದೆ. ಬಿಗ್ ಬಾಸ್ -11 ವಿನ್ನರ್ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.