ಚಾಮರಾಜನಗರ : ಹಾವು ಕಚ್ಚಿ 2 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬುವವರ ಮಗು ಸಾವನ್ನಪ್ಪಿದೆ. ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಶ್ರೀಧರ್ ಎಂಬುವವರು ತಮ್ಮ ಕುಟುಂಬದ ಜೊತೆ ಕಬ್ಬು ಕಟಾವು ಮಾಡಲು ಬಳ್ಳಾರಿಯಿಂದ ಬಂದಿದ್ದರು. ಈ ವೇಳೆ ಮಕ್ಕಳು ಕಬ್ಬಿನ ಗದ್ದೆಯಲ್ಲಿ ಆಟವಾಡುತ್ತಿದ್ದರು. ಆಗ ಹಾವು ಕಚ್ಚಿ ಮಗು ಮೃತಪಟ್ಟಿದೆ.