ಆನೇಕಲ್: ಹುಟ್ಟುಹಬ್ಬ ಆಚರಣೆ ಹೆಸರಲ್ಲಿ ಗದ್ದಲ-ಗಲಾಟೆ ಮಾಡುತ್ತಿರುವುದನ್ನು ಪ್ರಶ್ನೆ ಮಡಿದ್ದಕ್ಕೆ ಪಕ್ಕದ ಮನೆಯ ಅಕ್ಕ-ತಮ್ಮನಿಗೆ ರೌಡಿಶೀಟರ್ ಓರ್ವ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ರೌಡಿಶೀಟರ್ ಕರಿಯ ವಿಜಿ ತನ್ನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬರ್ಥ್ ಡೇ ಪಾರ್ಟಿ ಆಯೋಜಿಸಿದ್ದ. ಮದ್ಯದ ಅಮಲಿನಲ್ಲಿ ಜೋರಾಗಿ ಸೌಂಡ್ ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಿದ್ದರು. ಸೌಂಡ್ ಕೇಳಲಾಗದೇ ಪಕ್ಕದ ಮನೆಯ ಮಹಿಳೆ ಮಂಜುಳಾ ಎಂಬುವವರು ಪ್ರಶ್ನಿಸಿದ್ದಾರೆ. ಕಿವಿಗಡಚಿಕ್ಕುವ ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ.
ಇಷ್ಷಕ್ಕೇ ಕೋಪಗೊಂಡ ರೌಡಿಶೀಟರ್, ಮಹಿಳೆ ಮಂಜುಳಾ ಹಾಗೂ ಆಕೆಯ ತಮ್ಮನನ್ನು ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡು ಕೆಳಗೆ ಬಿದ್ದ ಮಂಜುಳಾ ಮೇಲೆ ಮತ್ತೆ ಎರಡು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಾವು ನಮ್ಮ ಬಿಲ್ಡಿಂಗ್ ನಲ್ಲಿ ಗಲಾಟೆ ಮಡ್ತಾವೇ, ಕುಣಿಯುತ್ತೇವೆ ಅದನ್ನು ಕೇಳಲು ನಿವ್ಯಾರು? ಎಂದು ಆವಾಜ್ ಹಾಕಿದ್ದಾನೆ.
ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಹೆಬ್ಬಗೋಶ್ಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.