ದೀಪಕ್ ಮಡಿವನಹಳ್ಳಿ ನಿರ್ದೇಶನದ ಗುರುನಂದನ್ ಅಭಿನಯದ ಬಹುನಿರೀಕ್ಷಿತ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ‘ಕಣ್ಮಣಿ’ ಎಂಬ ರೊಮ್ಯಾಂಟಿಕ್ ಮೆಲೋಡಿ ಗೀತೆ ಇಂದು youtube ನಲ್ಲಿ ಬಿಡುಗಡೆಯಾಗಿದೆ. ಸಂಜೀತ್ ಹೆಗಡೆ ಈ ಹಾಡಿಗೆ ಧ್ವನಿಯಾಗಿದ್ದು, ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಜ್ಯೋತಿ ವ್ಯಾಸರಾಜ್ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣ ಮಾಡಿದ್ದು, ಗುರುನಂದನ್ ಅವರಿಗೆ ಜೋಡಿಯಾಗಿ ಮೃದುಲಾ ಅಭಿನಯಿಸಿದ್ದಾರೆ. ಅಮಿತ್ ಜಾವಲ್ಕರ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಾಹಣ, ಮಾಸ್ ಮಾದ ಅವರ ಸಾಹಸ ನಿರ್ದೇಶನ, ಜಗದೀಶ್ ನಾಡನಳ್ಳಿ ಸಂಭಾಷಣೆ, ಹಾಗೂ ವಿ ಮುರಳಿ ನೃತ್ಯ ನಿರ್ದೇಶನವಿದೆ.