ಬೆಂಗಳೂರು : ಬೆಂಗಳೂರಿಗೆ ನಕಲಿ ಸಿಗರೇಟ್ ಪೂರೈಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಕೀಲ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ಶಬ್ಬೀರ್ ಗಾಗಿ ಹುಡುಕಾಟ ನಡೆಸಿದ್ದಾರೆ.
ಆರೋಪಿಗಳಿಂದ 3 ನಕಲಿ ಸಿಗರೇಟ್ ಬಾಕ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳು ಕಾಂಬೋಡಿಯಾದಿಂದ ನಕಲಿ ಸಿಗರೇಟ್ ತರಿಸಿ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದರು.ನಕಲಿ ಸಿಗರೇಟ್ ಪ್ಯಾಕ್ ಗೆ ಐಟಿಸಿ ಲೈಟ್ ಕಂಪನಿಯ ಲೇಬಲ್ ಅಂಟಿಸಿ ಸರಬರಾಜು ಮಾಡಲಾಗುತ್ತಿತ್ತು. ಐಟಿಸಿ ಕಂಪನಿ ಪ್ರತಿನಿಧಿ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.