ಬೆಂಗಳೂರು : ಜನವರಿ ಜ.11 ರಂದು (ಶನಿವಾರ) ಬೆಳಿಗ್ಗೆಯಿಂದ ಸಂಜೆಯವರೆಗೆ ಉದ್ಯಾನ ನಗರಿಯ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಡೆಸುತ್ತಿರುವ ತುರ್ತು ನಿರ್ವಹಣಾ ಕಾರ್ಯದಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಿಸಿದೆ.
ಶನಿವಾರ ಎಲ್ಲೆಲ್ಲಿ ಪವರ್ ಕಟ್?
”ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್ ಇಎಲ್, ಐಐಎಸ್ಸಿ ಬೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತ ಪುರ ಪೈಪ್ಲೈನ್ ರಸ್ತೆ, ಎಲ್ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಸುತ್ತಮುತ್ತಲಿನ ಪ್ರದೇಶ”ದಲ್ಲಿ ಕರೆಂಟ್ ಇರಲ್ಲ.