ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಬಿಎಮ್ಆರ್‌ಸಿಎಲ್ ನಿಂದ ಸಿಹಿ ಸುದ್ದಿ ನೀಡಲಾಗಿದೆ. ಪ್ರತಿ ಸೋಮವಾರ ಬೆಳಗಿನ ಜಾವ 4.15ರಿಂದಲೇ ಮೆಟ್ರೋ ಸಂಚಾರ ಆರಂಭವಾಗಲಿದೆ.
ಮುಂಜಾನೆ 5 ಗಂಟೆ ಬದಲಿಗೆ ಬೆಳಗಿನ ಜಾವ 4.15ಕ್ಕೆ ಪ್ರತಿ ಸೋಮವಾರ ಮೆಟ್ರೋ ಸಂಚಾರ ಆರಂಭಿಸಲಾಗುವುದು. ಪ್ರತಿ ಸೋಮವಾರದ ಮೆಟ್ರೋ ರೈಲು ಸಂಚಾರದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಜನವರಿ 13 ರಿಂದ ಈ ಸೇವೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ನಗರಕ್ಕೆ ಹಿಂತಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ಟರ್ಮಿನಲ್ ಸ್ಟೇಷನ್ ಗಳಿಂದಲೂ ಈ ಸೇವೆ ಇರುತ್ತದೆ. ಈ ಕುರಿತು ಬಿಎಂಆರ್‌ಸಿಎಲ್ ನಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.