ಮೈಸೂರು: ಫೆಬ್ರವರಿ 15 ರಂದು ಚಾಮರಾಜನಗರದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ, ಚಾಮರಾಜನಗರದಲ್ಲಿ ಸಂಪುಟ ಸಭೆ ನಡೆಸುವ ಮೂಲಕ ಆ ಭಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಶರಣಾದ ನಕ್ಸಲರ ಶಸ್ತ್ರಾಸ್ತ್ರ ನಾಪತ್ತೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಶಸ್ತ್ರಾಸ್ತ್ರ ಎಲ್ಲಿದೆ ಎನ್ನುವುದು ಪೊಲೀಸರಿಗೆ ಗೊತ್ತಿದೆ. ಮಹಜರು ಮಾಡಿ ಶಸ್ತ್ರಾಸ್ತ್ರಗಳನ್ನು ತರುತ್ತಾರೆ. ನಕ್ಸಲಿಸಂ ಇರಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಅನ್ಯಾಯ ಶೋಷಣೆ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವುದೇ ಹೋರಾಟ ನಡೆಸಿದರೂ ಶಾಂತಿಯುತವಾಗಿ ಇರಬೇಕು ಎಂದು ಹೇಳಿದ ಸಿಎಂ, ಮತ್ತೊಬ್ಬ ನಕ್ಸಲ್ ಇದ್ದಾನೋ ಇಲ್ಲವೋ ನಮಗೆ ಮಾಹಿತಿ ಇಲ್ಲ. ಮುಖ್ಯವಾಹಿನಿಗೆ ಬರುವಂತೆ ಆತನಿಗೂ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.