ಬೆಳಗಾವಿ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಮಾಡಿ ಆದೇಶ ಹೊರಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸರ್ವೇಯರ್ ಮೇಲ್ವಿಚಾರಕ ಆರ್.ಸಿ.ಪತ್ತಾರ್, ಸರ್ವೇಯರ್ ಎಂ.ಐ ಮುತ್ತಗಿ ಸೇರಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಖಾನಾಪುರ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂಮಾಪನ ಇಲಾಖೆ ಆಯುಕ್ತ ಜೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಹುಳಗುಂದ ಗ್ರಾಮದಲ್ಲಿ ಸರ್ವೆ ನಂಬರ್ 3ರಲ್ಲಿರುವ 508 ಎಕರೆ 20 ಗುಂಟೆ ಜಮೀನಿನ ಅಳತೆ ಭೂಮಿಯ 11ಎ ನಕ್ಷೆ ನೀಡುವ ವೇಳೆ ನಿರ್ಲಕ್ಷ್ಯಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.