alex Certify GOOD NEWS : ರಾಜ್ಯ ಸರ್ಕಾರದಿಂದ ‘ಬ್ರಾಹ್ಮಣ’ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ರಾಜ್ಯ ಸರ್ಕಾರದಿಂದ ‘ಬ್ರಾಹ್ಮಣ’ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

ಬೆಂಗಳೂರು : ರಾಜ್ಯ ಸರ್ಕಾರ ಬ್ರಾಹ್ಮಣ ಸಮುದಾಯಕ್ಕೆ ಈಗಾಗಲೇ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದು, ಬ್ರಾಹ್ಮಣ ಸಮುದಾಯದ ಜನರು ಯೋಜನೆಗಳ ಸದುಪಯೋಗ ಪಡೆಯಬಹುದಾಗಿದೆ. ಈ ಬಗ್ಗೆ ಸರ್ಕಾರ ಪ್ರಕಟ ಹೊರಡಿಸಿದೆ.

ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಯ ಮೂಲಕ ಈವರೆಗೆ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆ

ಅನ್ನದಾತ ಯೋಜನೆ

• ಕೃಷಿ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಕಡಿಮೆ ಬಡ್ಡಿ ದರಗಳಲ್ಲಿ ಅರ್ಹ ಬ್ರಾಹ್ಮಣ ರೈತರಿಗೆ ಸಾಲ ಸೌಲಭ್ಯ

• ವ್ಯವಸಾಯಕ್ಕಾಗಿ ತೆರೆದ ಬಾವಿ ಅಥವಾ ಬೋರ್ವೆಲ್ಗಳನ್ನು ಕೊರೆಯಲು ಸಹಾಯ ಧನ
• ಹೈನುಗಾರಿಕೆ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಹಾಯಧನ ಮತ್ತು ತರಬೇತಿ

ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಯ ಮೂಲಕ ಈವರೆಗೆ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು

ಆಚಾರ್ಯತ್ರಯ ವೇದ ಶಿಷ್ಯವೇತನ ಯೋಜನೆ

ಬ್ರಾಹ್ಮಣ ಸಮುದಾಯದ ವೇದ ವಿದ್ಯಾರ್ಥಿಗಳಿಗೆ | ಆಗಮ ವಿದ್ಯಾರ್ಥಿಗಳಿಗೆ /ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ / ವಿದ್ವಾಂಸರಿಗೆ ಶಿಷ್ಯವೇತನ

ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳ ಬ್ರಾಹ್ಮಣ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಬ್ರಾಹ್ಮಣ ಯುವತಿಯರಿಗೆ 3 ಲಕ್ಷ ಪ್ರೋತ್ಸಾಹಧನ

ಅರ್ಚಕ, ಪುರೋಹಿತರನ್ನು ಮದುವೆಯಾಗುವ ಬ್ರಾಹ್ಮಣ ಯುವತಿಯರಿಗೆ 3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಯ ಮೂಲಕ ಈವರೆಗೆ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು ಇದಾಗಿದೆ. ಅರುಂಧತಿ ಯೋಜನೆಯಡಿ ಬಡ ಬ್ರಾಹ್ಮಣ ಹುಡುಗಿಯ ಮದುವೆ ಸ೦ದರ್ಭದಲ್ಲಿ ₹25 ಸಾವಿರ ಪ್ರೋತ್ಸಾಹ ಧನ ಹಾಗೂ ಮೈತ್ರೇಯಿ ಯೋಜನೆಯಡಿ ಅರ್ಚಕರು ಮತ್ತು ಪುರೋಹಿತರನ್ನು ವಿವಾಹವಾಗುವ ಬ್ರಾಹ್ಮಣ ಯುವತಿಯರಿಗೆ ವರ್ಷಕ್ಕೆ ₹1 ಲಕ್ಷದಂತೆ ಒಟ್ಟು 3 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.ಅರ್ಚಕರು ಹಾಗೂ ಪುರೋಹಿತರನ್ನು ವಿವಾಹ ಆಗಲು ಯುವತಿಯರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿಯೂ ಮೈತ್ರಿ ಯೋಜನೆ ಜಾರಿಗೆ ತರಲಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...